ಮುಂಬೈ: ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ತಳಿಯ ಕೊರೋನಾ ಪ್ರಭೇದ ಪತ್ತೆಯಾಗಿವೆ. ಪೂನಾದಲ್ಲಿ 7 ಹೊಸ ಪ್ರಕರಣಗಳು ಪತ್ತೆಯಾಗಿವೆ.
ಪೂನಾದಲ್ಲಿ ಬಿ.ಎ.4 ಪ್ರಭೇದದ 4 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಬಿ.ಎ. 5 ಪ್ರಭೇದದ 3 ಪ್ರಕರಣಗಳು ಪತ್ತೆಯಾಗಿವೆ ಎಂದು ಮಹಾರಾಷ್ಟ್ರದ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಲಾಗಿದೆ. ಇದರೊಂದಿಗೆ ಮಹಾರಾಷ್ಟ್ರದಲ್ಲಿ ಕೋವಿಡ್ ಸಬ್ ವೇರಿಯಂಟ್ ಬಿ.ಎ.ಯ ಮೊದಲ ಪ್ರಕರಣಗಳು ವರದಿಯಾಗಿವೆ.