alex Certify BREAKING : ಬೆಂಗಳೂರಿನಲ್ಲಿ ತಡರಾತ್ರಿ `ಐಟಿ’ ರೇಡ್ : ಬೆಡ್ ರೂಮ್ ಮಂಚದ ಕೆಳಗೆ ಕೋಟ್ಯಾಂತರ ರೂ. ಪತ್ತೆ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಬೆಂಗಳೂರಿನಲ್ಲಿ ತಡರಾತ್ರಿ `ಐಟಿ’ ರೇಡ್ : ಬೆಡ್ ರೂಮ್ ಮಂಚದ ಕೆಳಗೆ ಕೋಟ್ಯಾಂತರ ರೂ. ಪತ್ತೆ !

ಬೆಂಗಳೂರು : ಬೆಂಗಳೂರಿನಲ್ಲಿ ತಡರಾತ್ರಿ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು, ದಾಳಿ ವೇಳೆ ಫ್ಲ್ಯಾಟ್ ನ ಬೆಡ್ ರೂಮ್ ನಲ್ಲಿ ಕೋಟ್ಯಾಂತರ ರೂಪಾಯಿ ಪತ್ತೆಯಾಗಿದೆ.

ತಡರಾತ್ರಿ ಐಟಿ ಅಧಿಕಾರಿಗಳು ಬೆಂಗಳೂರಿನ ಆರ್.ಟಿ ನಗರದ ಎರಡು ಕಡೆ ದಾಳಿ ನಡೆಸಿದ್ದು, ಆತ್ಮಾನಂದ ಕಾಲೋನಿಯ ಫ್ಲಾಟ್ ಒಂದರಲ್ಲಿ ಅಪಾರ ಪ್ರಮಾಣದ  ನಗದು ಪತ್ತೆಯಾಗಿದೆ.

500 ರೂ. ಮುಖಬೆಲೆಯ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ಬೆಡ್ ರೂಮ್ ನ ಮಂಚದ ಕೆಳಗೆ 23 ಬಾಕ್ಸ್ ಗಳಲ್ಲಿ ಕೋಟ್ಯಾಂತರ ರೂಪಾಯಿ ಬಚ್ಚಿಡಲಾಗಿದೆ. ಸದ್ಯ ಈ ಹಣವನ್ನು ವಶಕ್ಕೆ ಪಡೆದಿರುವ ಐಟಿ ಅಧಿಕಾರಿಗಳು ಹಣ ಯಾರಿಗೆ ಸೇರಿದ್ದು, ಹಣ ಪತ್ತೆಯಾದ ಫ್ಲ್ಯಾಟ್ ಯಾರಿಗೆ ಸೇರಿದ್ದು, ಫ್ಲ್ಯಾಟ್ ಮಾಲೀಕರು ಯಾರು ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...