ಮಾಡಿದ್ದುಣ್ಣೊ ಮಹಾರಾಯ ಅನ್ನುವ ಹಾಗೇ ಒಂದು ಕಾಲದಲ್ಲಿ ಬಿಹಾರದ ದೊರೆಯಾಗಿ ಮೆರೆಯುತ್ತಿದ್ದ, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್‌ಗೆ ಮೇವು ಹಗರಣ ಬಿಟ್ಟರು ಬಿಡದಂತೆ ಕಾಡುತ್ತಿದೆ. ಈ ಸಂಬಂಧ ಇಂದು ಅಂತಿಮ ತೀರ್ಪು ನೀಡಿರುವ ನ್ಯಾಯಾಲಯ ಲಾಲುಗೆ ಪಂಚ ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
’ಕರ್ಮ ರಿಟರ್ನ್ಸ್’ ಎಂದರೆ ಇದೇ ಅಲ್ಲವೇ….? ಶ್ವಾನಕ್ಕೆ ಒದೆಯಲು ಹೋಗಿ ತಾನೇ ಬಿದ್ದ ವ್ಯಕ್ತಿ…!
ಹೌದು, ಡೊರಾಂಡಾ ಖಜಾನೆಯಿಂದ 139.35 ಕೋಟಿ ರೂ.ಗಳನ್ನು ಅಕ್ರಮವಾಗಿ ಕಬಳಿಸಿದ್ದಕ್ಕೆ ಸಂಬಂಧಿಸಿದಂತೆ, ಐದನೇ ಮತ್ತು ಕೊನೆಯ ಮೇವು ಹಗರಣ ಪ್ರಕರಣದಲ್ಲಿ, ಲಾಲು ಪ್ರಸಾದ್ ಯಾದವ್‌ಗೆ ವಿಶೇಷ ಸಿಬಿಐ ನ್ಯಾಯಾಲಯ ಸೋಮವಾರ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
1996 ರಲ್ಲಿ ಕೆಲವು ಸರ್ಕಾರಿ ನೌಕರರು ಸುಳ್ಳು ವೆಚ್ಚದ ವರದಿಗಳನ್ನು ಸಲ್ಲಿಸಿದ ವರದಿಗಳ ನಂತರ ಮೇವು ಹಗರಣವು ಬೆಳಕಿಗೆ ಬಂದಿತು. ಈ ವೇಳೆ ಡೊರಾಂಡಾದ ಖಜಾನೆಯಿಂದ ಕೋಟ್ಯಾಂತರ ರೂಪಾಯಿಗಳನ್ನು ಪೋಲು ಮಾಡಲಾಗಿದ್ದು, ಸರಿಯಾಗಿ ಪರಿಶೀಲಿಸದೆ ನಿಷ್ಪ್ರಯೋಜಕ ವೆಚ್ಚದ ಲೆಕ್ಕಾಚಾರ ಸಲ್ಲಿಸಿರುವುದು ತಿಳಿದು ಬಂದಿತು. ಈ ಹಗರಣದಿಂದ ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ಲಾಲು ಯಾದವ್ ರಾಜೀನಾಮೆ ನೀಡಬೇಕಾಯಿತು.