
ಹೌಂಗ್ಝೌ : ಏಷ್ಯನ್ ಪ್ಯಾರಾ ಗೇಮ್ಸ್ ಪುರುಷರ ಶಾಟ್ ಪುಟ್ ಎಫ್ 46 ನಲ್ಲಿ ಭಾರತದ ಸಚಿನ್ ಖಿಲಾರಿ ಚಿನ್ನದ ಪದಕ ಗೆದ್ದರೆ, ರೋಹಿತ್ ಕಂಚಿನ ಪದಕ ಪಡೆದಿದ್ದಾರೆ.
ಏಷ್ಯನ್ ಪ್ಯಾರಾಗೇಮ್ಸ್ ನ ಪುರುಷರ ಶಾಟ್ ಪುಟ್-ಎಫ್ 46 ನಲ್ಲಿ ಭಾರತ 2 ಗಮನಾರ್ಹ ಪದಕಗಳನ್ನು ಗಳಿಸಿದೆ. ಸಚಿನ್ ಖಿಲಾರಿ 16.03 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರು. ರೋಹಿತ್ ಹೋ 14.56 ಸೆಕೆಂಡುಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಗೆದ್ದರು. ಈ ಮೂಲಕ ಭಾರತದ ಖಾತೆಗೆ ಮತ್ತೆರಡು ಪದಕ ಸೇರಿಸಿದ್ದಾರೆ.