
ಹೌಂಗ್ಝೌ : ಏಷ್ಯನ್ ಪ್ಯಾರಾ ಗೇಮ್ಸ್ ಪುರುಷರ 400 ಮೀಟರ್ ಟಿ-47 ಸ್ಪರ್ಧೆಯಲ್ಲಿ ಭಾರತದ ದಿಲೀಪ್ ಮಹದು ಗವಿತ್ ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಇಂದು ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದಾರೆ.
ಇದು ಏಷ್ಯನ್ ಪ್ಯಾರಾಗೇಮ್ಸ್ 2022 ರಲ್ಲಿ ದಿನದ ಮೊದಲ ಪದಕವಾಗಿದೆ, ದಿಲೀಪ್ ಮಹದು ಗವಿತ್ ಪುರುಷರ 400 ಮೀಟರ್ ಟಿ47 ಸ್ಪರ್ಧೆಯಲ್ಲಿ 49.48 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು.