alex Certify BREAKING NEWS: ಅ. 15 ರಿಂದ ಪ್ರವಾಸಿ ವೀಸಾ ನೀಡಲು ನಿರ್ಧಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಅ. 15 ರಿಂದ ಪ್ರವಾಸಿ ವೀಸಾ ನೀಡಲು ನಿರ್ಧಾರ

ನವದೆಹಲಿ: ಅಕ್ಟೋಬರ್ 15 ರಿಂದ ಚಾರ್ಟರ್ಡ್ ವಿಮಾನಗಳ ಮೂಲಕ ಬರುವ ವಿದೇಶಿಯರಿಗೆ ಪ್ರವಾಸಿ ವೀಸಾವನ್ನು ನೀಡಲಾಗುವುದು.

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಗುರುವಾರ ಈ ಬಗ್ಗೆ ಮಾಹಿತಿ ನೀಡಿ, ಅಕ್ಟೋಬರ್ 15 ರಿಂದ ಚಾರ್ಟರ್ಡ್ ವಿಮಾನಗಳ ಮೂಲಕ ಭಾರತಕ್ಕೆ ಬರುವ ವಿದೇಶಿಯರಿಗೆ ಹೊಸ ಪ್ರವಾಸಿ ವೀಸಾಗಳನ್ನು ನೀಡಲು ಆರಂಭಿಸುವುದಾಗಿ ತಿಳಿಸಿದೆ.  ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ವಿಮಾನಯಾನ ಸಂಸ್ಥೆಗಳು ಸರ್ಕಾರವನ್ನು ವಿನಂತಿಸಿವೆ.

ಚಾರ್ಟರ್ಡ್ ವಿಮಾನವನ್ನು ಹೊರತುಪಡಿಸಿ ಬೇರೆ ವಿಮಾನಗಳ ಮೂಲಕ ಭಾರತಕ್ಕೆ ಪ್ರಯಾಣಿಸುವ ವಿದೇಶಿ ಪ್ರವಾಸಿಗರು ನವೆಂಬರ್ 15 ರಿಂದ ಎಲ್ಲಾ ಕೋವಿಡ್ -19 ಪ್ರೋಟೋಕಾಲ್‌ಗಳಿಗೆ ಅನುಸಾರವಾಗಿ ವೀಸಾ ನೀಡಲು ಸಾಧ್ಯವಾಗುತ್ತದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...