ನವದೆಹಲಿ: ಅಕ್ಟೋಬರ್ 15 ರಿಂದ ಚಾರ್ಟರ್ಡ್ ವಿಮಾನಗಳ ಮೂಲಕ ಬರುವ ವಿದೇಶಿಯರಿಗೆ ಪ್ರವಾಸಿ ವೀಸಾವನ್ನು ನೀಡಲಾಗುವುದು.
ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಗುರುವಾರ ಈ ಬಗ್ಗೆ ಮಾಹಿತಿ ನೀಡಿ, ಅಕ್ಟೋಬರ್ 15 ರಿಂದ ಚಾರ್ಟರ್ಡ್ ವಿಮಾನಗಳ ಮೂಲಕ ಭಾರತಕ್ಕೆ ಬರುವ ವಿದೇಶಿಯರಿಗೆ ಹೊಸ ಪ್ರವಾಸಿ ವೀಸಾಗಳನ್ನು ನೀಡಲು ಆರಂಭಿಸುವುದಾಗಿ ತಿಳಿಸಿದೆ. ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ವಿಮಾನಯಾನ ಸಂಸ್ಥೆಗಳು ಸರ್ಕಾರವನ್ನು ವಿನಂತಿಸಿವೆ.
ಚಾರ್ಟರ್ಡ್ ವಿಮಾನವನ್ನು ಹೊರತುಪಡಿಸಿ ಬೇರೆ ವಿಮಾನಗಳ ಮೂಲಕ ಭಾರತಕ್ಕೆ ಪ್ರಯಾಣಿಸುವ ವಿದೇಶಿ ಪ್ರವಾಸಿಗರು ನವೆಂಬರ್ 15 ರಿಂದ ಎಲ್ಲಾ ಕೋವಿಡ್ -19 ಪ್ರೋಟೋಕಾಲ್ಗಳಿಗೆ ಅನುಸಾರವಾಗಿ ವೀಸಾ ನೀಡಲು ಸಾಧ್ಯವಾಗುತ್ತದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ.