alex Certify BREAKING : ಚಿಕ್ಕಮಗಳೂರಲ್ಲಿ ಪಟಾಕಿ ಸಿಡಿದು ದುರಂತ : ಓರ್ವ ಸಾವು, ಹಲವರಿಗೆ ಗಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಚಿಕ್ಕಮಗಳೂರಲ್ಲಿ ಪಟಾಕಿ ಸಿಡಿದು ದುರಂತ : ಓರ್ವ ಸಾವು, ಹಲವರಿಗೆ ಗಾಯ

ಚಿಕ್ಕಮಗಳೂರು : ಪಟಾಕಿ ಸಿಡಿದು ಓರ್ವ ಮೃತಪಟ್ಟು, ಹಲವರು ಗಾಯಗೊಂಡ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಸುಣ್ಣದಹಳ್ಳಿಯಲ್ಲಿ ನಡೆದಿದೆ.

ಮೃತನನ್ನು 30 ವರ್ಷದ ಪ್ರದೀಪ್ ಎಂದು ಗುರುತಿಸಲಾಗಿದೆ. ಪಟಾಕಿ ಸಿಡಿದ ರಭಸಕ್ಕೆ ಈತ 5 ಅಡಿ ಹಾರಿ ಬಿದ್ದಿದ್ದಾನೆ ಎಂದು ತಿಳಿದು ಬಂದಿದೆ. ಪ್ರದೀಪ್ ಜೊತೆಗಿದ್ದ ಮತ್ತೋರ್ವ ಯುವಕ ಹಾಗೂ ಮೂವರು ಮಕ್ಕಳು ಕೂಡ ಗಾಯಗೊಂಡಿದ್ದಾರೆ. ತರೀಕೆರೆ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಪ್ರದೀಪ್ ಮನೆಯ ಚೇರ್ ಕೆಳಗಡೆ ಪಟಾಕಿ ಬ್ಯಾಗ್ ತಂದಿಟ್ಟಿದ್ದರು. ಈ ವೇಳೆ ಹೊರಗಡೆಯಿಂದ ಬಂದ ಪಟಾಕಿಯ ಕಿಡಿಯೊಂದು ಬ್ಯಾಗ್ ಗೆ ತಗುಲಿ ಇಡೀ ಬ್ಯಾಗ್ ನಲ್ಲಿದ್ದ ಪಟಾಕಿಗಳು ಸ್ಪೋಟಗೊಂಡಿದೆ. ಪರಿಣಾಮ ಮನೆಯ ಗಾಜು ಪುಡಿ ಪುಡಿಯಾಗಿದೆ ಎಂದು ತಿಳಿದು ಬಂದಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...