alex Certify BREAKING : ಹಾವೇರಿಯಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಆರೋಪಿಗಳ ವಿರುದ್ಧ ಮಹಿಳೆಯಿಂದ ʻಗ್ಯಾಂಗ್ ರೇಪ್ʼ ಆರೋಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಹಾವೇರಿಯಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಆರೋಪಿಗಳ ವಿರುದ್ಧ ಮಹಿಳೆಯಿಂದ ʻಗ್ಯಾಂಗ್ ರೇಪ್ʼ ಆರೋಪ

ಹಾವೇರಿ : ಹಾವೇರಿ ಜಿಲ್ಲೆಯ ಹಾನಗಲ್ ನಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಆರೋಪಿಗಳ ವಿರುದ್ಧ ಸಂತ್ರಸ್ತ ಮಹಿಳೆ ʻಗ್ಯಾಂಗ್ ರೇಪ್ʼ ಆರೋಪ ಮಾಡಿದ್ದಾರೆ.

ಹೋಟೆಲ್ ನಲ್ಲಿ ಹಲ್ಲೆ ನಡೆಸಿದ ಬಳಿಕ ನನ್ನನ್ನು ಕಾಡಿಗೆ ಕರೆದುಕೊಂಡು ಹೋಗಿ ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಒಬ್ಬರು ಆದ ಮೇಲೆ ಒಬ್ಬರು ಗ್ಯಾಂಗ್ ರೇಪ್ ಮಾಡಿದ್ದಾರೆ ಎಂದು 7 ಪುಂಡರ ವಿರುದ್ಧ ಸಂತ್ರಸ್ತ ಮುಸ್ಲಿಂ ಮಹಿಳೆ ಆರೋಪಿಸಿದ್ದಾರೆ.

ಹಾವೇರಿ ಜಿಲ್ಲೆಯ ಹಾನಗಲ್ ಖಾಸಗಿ ಹೋಟೆಲ್ ಗೆ ನುಗ್ಗಿದ ಯುವಕರ ಗುಂಪೊಂದು ವಿವಾಹಿತ ಮಹಿಳೆ ಜೊತೆಗಿದ್ದ ವ್ಯಕ್ತಿಗೆ ಥಳಿಸಿತ್ತು. ಹೋಟೆಲ್ ರೂನಲ್ಲಿ ತಂಗಿದ್ದಂತ ಹಿಂದೂ-ಮುಸ್ಲಿಂ ಜೋಡಿಯ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಮುಸ್ಲಿಂ ಮಹಿಳೆ ಜೊತೆ ಅನ್ಯಕೋಮಿನ   ವ್ಯಕ್ತಿ   ಇದ್ದಾನೆ ಎಂದು ಯುವಕರ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿತ್ತು, ಈ ವಿಡಿಯೋ ವೈರಲ್ ಆಗಿತ್ತು. ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಸಾಂದರ್ಭಿಕ ಚಿತ್ರ

 

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...