alex Certify BREAKING : ಸಿಡ್ನಿ ಚರ್ಚ್ ನಲ್ಲಿ ಮತ್ತೆ ಚೂರಿ ಇರಿತ, ಹಲವರಿಗೆ ಗಾಯ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಸಿಡ್ನಿ ಚರ್ಚ್ ನಲ್ಲಿ ಮತ್ತೆ ಚೂರಿ ಇರಿತ, ಹಲವರಿಗೆ ಗಾಯ..!

ಸಿಡ್ನಿ ಚರ್ಚ್ ನಲ್ಲಿ ನಡೆದ ಚೂರಿ ಇರಿತದಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿದೆ.

ಘಟನೆ ಸಂಬಂಧ ಅಧಿಕಾರಿಗಳು ಒಬ್ಬ ಪುರುಷನನ್ನು ಬಂಧಿಸಿದ್ದು ಆತನನ್ನು ವಿಚಾರಣೆ ಮಾಡಲಾಗುತ್ತಿದೆ ಎಂದು ಪೊಲೀಸ್ ಹೇಳಿಕೆ ತಿಳಿಸಿದೆ.

ಚೂರಿ ಇರಿತದಿಂದ ಹಲವರಿಗೆ ಗಾಯಗಳಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಚರ್ಚ್ ನಲ್ಲಿ ನಡೆದ ಪ್ರಾರ್ಥನೆಯ ಸಮಯದಲ್ಲಿ ಚರ್ಚ್ ನಾಯಕ ಮತ್ತು ಹಲವಾರು ಆರಾಧಕರಿಗೆ ಚೂರಿಯಿಂದ ಇರಿದಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ಘಟನೆಯ ವೀಡಿಯೊಗಳು ಆನ್ ಲೈನ್ ನಲ್ಲಿ ಹರಿದಾಡುತ್ತಿದೆ.ಸಿಡ್ನಿಯ ಬೊಂಡಿ ಪ್ರದೇಶದ ಮಾಲ್ ನಲ್ಲಿ ಶನಿವಾರ ಚಾಕು ಇರಿತದಿಂದ ಆರು ಜನರು ಸಾವನ್ನಪ್ಪಿದ ನಂತರ ಸಿಡ್ನಿಯಲ್ಲಿ ನಡೆದ ಎರಡನೇ ಘಟನೆ ಇದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...