ಅರುಣಾಚಲ ಪ್ರದೇಶದಲ್ಲಿ ಭಾನುವಾರ ಹಿಮಕುಸಿತದಲ್ಲಿ ಸಿಲುಕಿದ್ದ ಏಳು ಮಂದಿ ಭಾರತೀಯ ಯೋಧರ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ ಎಂದು ಭಾರತೀಯ ಸೇನೆಯು ಇಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಪ್ರತಿಕೂಲ ಹವಾಮಾನ ಹಾಗೂ ಹಿಮಪಾತದಿಂದಾಗಿದೆ ಎತ್ತರದ ಕಮೆಂಗ್ ಸೆಕ್ಟರ್ನಲ್ಲಿ ಗಸ್ತು ವಾಹನವು ಸಿಲುಕಿಕೊಂಡಿತ್ತು . ಕೂಡಲೇ ಭಾರತೀಯ ಸೇನೆಯ ಗಸ್ತು ವಾಹನಕ್ಕಾಗಿ ಹುಡುಕಾಟ ಆರಂಭವಾಗಿತ್ತು ಎಂದು ಭಾರತೀಯ ಸೇನೆಯು ಮಾಹಿತಿ ನೀಡಿದೆ.
ರಕ್ಷಣಾ ಕಾರ್ಯವನ್ನು ಅತ್ಯಂತ ಚುರುಕುಗತಿಯಲ್ಲಿ ನಡೆಸಲಾಗಿತ್ತಾದರೂ ದುರಾದೃಷ್ಟವಶಾತ್ ಎಲ್ಲಾ ಏಳು ಮಂದಿ ಭಾರತೀಯ ಸೇನೆಯ ಯೋಧರು ಸಾವನ್ನಪ್ಪಿದ್ದಾರೆ ಎಂದು ಸೇನೆಯು ಅಧಿಕೃತ ಮಾಹಿತಿ ನೀಡಿದೆ.