ಕವಿ ಹಾಗೂ ಸಾಮಾಜಿಕ ಕಾರ್ಯಕರ್ತ ಕುಮಾರ್ ವಿಶ್ವಾಸ್ರಿಗೆ ವೈ ಕ್ಯಾಟಗರಿ ಭದ್ರತೆಯನ್ನು ನೀಡಲು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ನಿರ್ಧರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕುಮಾರ್ ವಿಶ್ವಾಸ್ ರಿಗೆ ಬೆದರಿಕೆ ಇರುವುದು ಇಂಟೆಲಿಜೆನ್ಸ್ ಬ್ಯೂರೋದ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ವಿರುದ್ಧ ಕುಮಾರ್ ವಿಶ್ವಾಸ್ ಇತ್ತೀಚೆಗೆ ನೀಡಿದ ಹೇಳಿಕೆಗಳ ಬೆನ್ನಲ್ಲೇ ಅವರಿಗೆ ಬೆದರಿಕೆಯೊಡ್ಡಲಾಗುತ್ತಿದೆ ಎಂದು ಇಂಟೆಲಿಜೆನ್ಸ್ ಬ್ಯುರೋ ಮಾಹಿತಿ ನೀಡಿದೆ.
ಏನಿದು ವೈ ಕ್ಯಾಟಗಿರಿ ಭದ್ರತೆ..?
ಸಿಆರ್ಪಿಎಫ್ ಯೋಧರು ಇನ್ಮುಂದೆ ಕುಮಾರ್ ವಿಶ್ವಾಸ್ರ ಸುರಕ್ಷತೆಯ ಜವಾಬ್ದಾರಿಯನ್ನು ವಹಿಸಲಿದ್ದಾರೆ. ವೈ ಕ್ಯಾಟಗಿರಿ ಭದ್ರತೆಯು 8 ಮಂದಿ ಸಿಬ್ಬಂದಿಯನ್ನು ಒಳಗೊಂಡಿರುತ್ತದೆ. ಅವರಲ್ಲಿ ಐವರು ರಕ್ಷಕರ ನಿವಾಸದಲ್ಲಿ ಇರುತ್ತಾರೆ.
ಮಾರ್ಗಸೂಚಿಯಂತೆ ಉಳಿದ ಮೂವರು ರಕ್ಷಣೆಯನ್ನು ಪಡೆದುಕೊಂಡ ವ್ಯಕ್ತಿಯು ಎಲ್ಲಿಯೇ ಹೋದರೂ ಮೂರು ಪಾಳಿಗಳಲ್ಲಿ ಅವರೊಂದಿಗೆ ಹೋಗುತ್ತಾರೆ.
ಪ್ರಸಿದ್ಧ ಕವಿ ಹಾಗೂ ಮಾಜಿ ಆಪ್ ನಾಯಕ ಕುಮಾರ್ ವಿಶ್ವಾಸ್, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಪ್ರತ್ಯೇಕತಾವಾದಿಗಳೊಂದಿಗೆ ಸಂಪರ್ಕವನ್ನು ಹೊಂದಿದ್ದಾರೆ ಎಂದು ಆರೋಪಿಸಿದ್ದರು.