ದಾವಣಗೆರೆ: ಬಟ್ಟೆ ಒಣಗಿಸುವ ತಂತಿಗೆ ವಿದ್ಯುತ್ ಹರಿದು ಗಂಡ-ಹೆಂಡತಿ ಇಬ್ಬರೂ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಬಾವಿಯಾಳು ಗ್ರಾಮದಲ್ಲಿ ನಡೆದಿದೆ.
ರವಿಶಂಕರ್ (40) ಹಾಗೂ ವೀಣಾ (28) ಮೃತರು. ಬಟ್ಟೆ ಒಣಗಿಸಲು ಕಟ್ಟಿದ್ದ ತಂತಿಗೆ ವಿದ್ಯುತ್ ಹರಿದು ಈ ದುರಂತ ಸಂಭವಿಸಿದೆ.
ತಂತಿಗೆ ಬಟ್ಟೆ ಒಣ ಹಾಕುತ್ತಿದ್ದಾಗ ವೀಣಾಗೆ ವಿದ್ಯುತ್ ತಗುಲಿದೆ. ಪತ್ನಿಯನ್ನು ಉಳಿಸಲು ಹೋಗಿ ಪತಿಗೂ ಕರೆಂಟ್ ಶಾಕ್ ತಗುಲಿದ್ದು, ಇಬ್ಬರೂ ಸಾವನ್ನಪ್ಪಿದ್ದಾರೆ.