alex Certify BREAKING: ‘ಪೆಗಾಸಸ್​’ ಪ್ರಕರಣದಲ್ಲಿ ಸುಪ್ರೀಂ ಮಹತ್ವದ ತೀರ್ಮಾನ; ಮೂವರು ಸದಸ್ಯರ ಸಮಿತಿ ರಚಿಸಿದ ಸರ್ವೋಚ್ಚ ನ್ಯಾಯಾಲಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ‘ಪೆಗಾಸಸ್​’ ಪ್ರಕರಣದಲ್ಲಿ ಸುಪ್ರೀಂ ಮಹತ್ವದ ತೀರ್ಮಾನ; ಮೂವರು ಸದಸ್ಯರ ಸಮಿತಿ ರಚಿಸಿದ ಸರ್ವೋಚ್ಚ ನ್ಯಾಯಾಲಯ

ಪೆಗಾಸಸ್​​​ ಬಳಸಿ ಕೇಂದ್ರ ಸರ್ಕಾರ ಮೊಬೈಲ್​ ಫೋನ್​ ಕದ್ದಾಲಿಕೆ ಮಾಡಿದ ಎಂಬ ಆರೋಪದ ಅಡಿಯಲ್ಲಿ ಸ್ವತಂತ್ರ ತನಿಖೆಗೆ ಕೋರಿ ಹಲವರು ಕೋರಿದ್ದ ಅರ್ಜಿ ಸಂಬಂಧ ಸುಪ್ರೀಂಕೋರ್ಟ್​ ಮಧ್ಯಂತರ ಆದೇಶ ಪ್ರಕಟಿಸಿದೆ.

ಪ್ರಕರಣ ಸಂಬಂಧ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ಆರ್​.ವಿ. ರವೀಂದ್ರನ್​ ನೇತೃತ್ವದಲ್ಲಿ ಸಮಿತಿಯನ್ನು ರಚಿಸುವುದಾಗಿ ಆದೇಶ ನೀಡಿದೆ.

ಇಸ್ರೆಲ್​ ಕಂಪನಿಯ ಗೂಢಚರ್ಯ ತಂತ್ರಾಂಶವಾದ ಪೆಗಾಸಸ್​ ಬಳಸಿ ಕೇಂದ್ರ ಸರ್ಕಾರ ಪತ್ರಕರ್ತರು, ರಾಜಕಾರಣಿಗಳು ಸೇರಿದಂತೆ ಸಾಕಷ್ಟು ಗಣ್ಯರ ಫೋನ್​ ಕದ್ದಾಲಿಕೆ ಮಾಡಿದೆ ಎಂಬ ಆರೋಪ ಎದುರಾಗಿತ್ತು.

ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿಗಳಾದ ಎನ್​.ವಿ. ರಮಣ, ನ್ಯಾ. ಸೂರ್ಯಕಾಂತ್​ ಹಾಗೂ ಹಿಮಾ ಕೊಹ್ಲಿ ನೇತೃತ್ವದ ಪೀಠ ಸೆಪ್ಟೆಂಬರ್​ 13ರಂದು ವಿಚಾರಣೆಯನ್ನು ಪೂರೈಸಿತ್ತು. ಹಾಗೂ ಇಂದು ತೀರ್ಪನ್ನು ಕಾಯ್ದಿರಿಸಿತ್ತು. ಈ ಪ್ರಕರಣ ಸಂಬಂಧ ಸಮಿತಿಯೊಂದನ್ನು ರಚಿಸಿದ್ದ ಸುಪ್ರೀಂಕೋರ್ಟ್​ ಈ ವರದಿಯನ್ನು ಆಧರಿಸಿ ತೀರ್ಪು ನೀಡಿದೆ.

ಈ ಪ್ರಕರಣವನ್ನು ಅಲ್ಲಗಳೆಯುವಂತಹ ಯಾವುದೇ ನಿರ್ದಿಷ್ಟ ಪ್ರತಿಕ್ರಿಯೆಗಳನ್ನು ಸುಪ್ರೀಂಕೋರ್ಟ್ ನೀಡಿಲ್ಲ. ಹೀಗಾಗಿ ಅರ್ಜಿದಾರರ ಆರೋಪಗಳನ್ನು ಒಪ್ಪಿಕೊಳ್ಳದೇ ನಮಗೆ ಬೇರೆ ಆಯ್ಕೆಗಳಿಲ್ಲ. ಆದ್ದರಿಂದ ಈ ಪ್ರಕರಣ ಸಂಬಂಧ ತನಿಖೆ ನಡೆಸಲು ನಾವು ಪರಿಣಿತರ ಸಮಿತಿಯನ್ನು ರಚಿಸುತ್ತೇವೆ ಹಾಗೂ ಇದರ ಮೇಲ್ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನೋಡಿಕೊಳ್ಳಲಿದೆ ಎಂದು ಹೇಳಿದೆ.

ಸುಪ್ರೀಂ ಕೋರ್ಟ್ ರಚಿಸಲಿರುವ ಈ ಸಮಿತಿಯಲ್ಲಿ ಮೂವರು ಸದಸ್ಯರು ಇರಲಿದ್ದಾರೆ. ಈ ಸಮಿತಿಗೆ ವರದಿಯನ್ನು ಸಲ್ಲಿಸಲು ಎಸ್​ಐಟಿಗೆ ಕೋರ್ಟ್​ 8 ವಾರಗಳ ಕಾಲಾವಕಾಶವನ್ನು ನೀಡಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...