ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬ್ ಗೆ ಭೇಟಿ ನೀಡಿದ ವೇಳೆ ಆದ ಭದ್ರತಾ ಲೋಪದ ಕುರಿತು ತನಿಖೆ ನಡೆಸುವ ಸಲುವಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ನೇತೃತ್ವದಲ್ಲಿ ನಾಲ್ವರು ಸದಸ್ಯರ ತಂಡ ರಚಿಸಿದೆ.
ಜನವರಿ 5 ರಂದು ನರೇಂದ್ರ ಮೋದಿಯವರು ಪಂಜಾಬ್ ಗೆ ಭೇಟಿ ನೀಡಿದ ವೇಳೆ ರೈತರ ಪ್ರತಿಭಟನೆ ಹಿನ್ನಲೆಯಲ್ಲಿ 20 ನಿಮಿಷಗಳ ಕಾಲ ಅವರಿದ್ದ ವಾಹನ ರಸ್ತೆಯಲ್ಲೇ ನಿಂತಿತ್ತು.
ಪಂಜಾಬ್ ಪೊಲೀಸರಿಗೆ ಪ್ರಧಾನಿಯವರು ಭೇಟಿ ನೀಡುತ್ತಾರೆಂಬ ಮಾಹಿತಿ ಇದ್ದರೂ ಸೂಕ್ತ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ವಹಿಸಿದ್ದರೆಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ತನಿಖೆ ನಡೆಸಲು ಇದೀಗ ಸುಪ್ರೀಂ ಕೋರ್ಟ್ ನಾಲ್ವರು ಸದಸ್ಯರ ತಂಡವನ್ನು ನೇಮಿಸಿದೆ.