alex Certify BREAKING: ಡೆನ್ಮಾರ್ಕ್ ಮಾಲ್ ನಲ್ಲಿ ಯುವಕನಿಂದ ಗುಂಡಿನ ದಾಳಿ, ಮೂವರ ಸಾವು ಹಲವರಿಗೆ ಗಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಡೆನ್ಮಾರ್ಕ್ ಮಾಲ್ ನಲ್ಲಿ ಯುವಕನಿಂದ ಗುಂಡಿನ ದಾಳಿ, ಮೂವರ ಸಾವು ಹಲವರಿಗೆ ಗಾಯ

ಭಾನುವಾರದಂದು ಡೆನ್ಮಾರ್ಕ್ ಮಾಲ್ ನಲ್ಲಿ 22 ವರ್ಷದ ಯುವಕನೊಬ್ಬ ಮನಬಂದಂತೆ ಗುಂಡು ಹಾರಿಸಿದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಆರೋಪಿ ಯುವಕನನ್ನು ಈಗ ಬಂಧಿಸಲಾಗಿದೆಯಾದರೂ ದಾಳಿ ಹಿಂದಿನ ಕಾರಣ ಬಹಿರಂಗವಾಗಿಲ್ಲ.

ಪ್ರತ್ಯಕ್ಷದರ್ಶಿಗಳ ಪ್ರಕಾರ ರೈಫಲ್ ಹೊಂದಿದ್ದ ಯುವಕನೊಬ್ಬ ಸಿಟ್ಟಿ ಸೆಂಟರ್ ಹಾಗೂ ಕೂಪನ್ ಹೇಗನ್ ವಿಮಾನ ನಿಲ್ದಾಣದ ಮಧ್ಯೆ ಇರುವ ಶಾಪಿಂಗ್ ಮಾಲ್ ಪ್ರವೇಶಿಸಿ ಏಕಾಏಕಿ ಗುಂಡು ಹಾರಿಸಲು ಆರಂಭಿಸಿದ್ದಾನೆ.

ಇದರಿಂದಾಗಿ 40 ವರ್ಷದ ವ್ಯಕ್ತಿ ಹಾಗೂ ಇಬ್ಬರು ತರುಣರು ಮೃತಪಟ್ಟಿದ್ದಾರೆ. ಗಾಯಗೊಂಡವರ ಪೈಕಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ದಾಳಿ ಹಿಂದಿನ ದಿನ ಕಾರಣಗಳನ್ನು ಪತ್ತೆ ಹಚ್ಚಲಾರಂಭಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...