ಹಲವು ದಿನಗಳಿಂದ ಬಿಕ್ಕಟ್ಟಿನ ವಾತಾವರಣವನ್ನು ಉಂಟು ಮಾಡಿದ್ದ ರಷ್ಯಾ ಹಾಗೂ ಉಕ್ರೇನ್ ನಡುವೆ ಇದೀಗ ಯುದ್ಧದ ವಾತಾವರಣ ಉಂಟಾಗಿದೆ.
ವ್ಲಾಡಿಮಿರ್ ಪುಟಿನ್ ಯುದ್ಧ ಘೋಷಣೆ ಮಾಡಿದ ಎರಡನೇ ದಿನವಾದ ಇಂದೂ ಕೂಡ ಉಕ್ರೇನ್ನಲ್ಲಿ ಪರಿಸ್ಥಿತಿ ಗಂಭೀರವಾಗಿಯೇ ಇದೆ.
ಉಕ್ರೇನ್ನ ಮೇಲೆ ರಷ್ಯಾದ ಆಕ್ರಮಣವು ಹೆಚ್ಚಾದ ಬೆನ್ನಲ್ಲೇ ರಷ್ಯಾ ವಿದೇಶಾಂಗ ಸಚಿವ ಸೆರ್ಗಯ್ ಲಾವ್ರೋವ್ ಉಕ್ರೇನ್ ಸೇನೆಯು ನಮ್ಮ ಮುಂದೆ ಶರಣಾದರೆ ಕೈವ್ ಜೊತೆಗೆ ಮಾತುಕತೆಗೆ ನಾವು ಸಿದ್ಧರಿದ್ದೇವೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.