alex Certify ವರನಿಲ್ಲದೆ ವಿವಾಹ ಜೀವನಕ್ಕೆ ಕಾಲಿಟ್ಟ ರೂಪದರ್ಶಿ: ಬ್ರೆಜಿಲ್ ನಲ್ಲಿ ನಡೆಯಿತು ಡಿಫರೆಂಟ್ ಮದುವೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರನಿಲ್ಲದೆ ವಿವಾಹ ಜೀವನಕ್ಕೆ ಕಾಲಿಟ್ಟ ರೂಪದರ್ಶಿ: ಬ್ರೆಜಿಲ್ ನಲ್ಲಿ ನಡೆಯಿತು ಡಿಫರೆಂಟ್ ಮದುವೆ

ಪ್ರಿಯತಮೆಯಿಂದ ಮೋಸ ಹೋದ ಯುವಕರು ಕುಡಿದು ದೇವದಾಸನ ಹಾಗೆ ಆಗುತ್ತಾರೆ ಅನ್ನೋ ಮಾತುಗಳಿವೆ. ಆದರೆ ಹುಡುಗಿಗೆ ಹುಡುಗ ಮೋಸ ಮಾಡಿದ್ರೆ ಆಕೆ ಏನು ಮಾಡುತ್ತಾಳೆ..? ಇಲ್ಲೊಬ್ಬಾಕೆ ರೂಪದರ್ಶಿ ಪ್ರಿಯತಮನಿಂದ ಮೋಸ ಹೋದ ಬಳಿಕ ಏನು ಮಾಡಿದಳು ಗೊತ್ತಾ..?

ಬ್ರೆಜಿಲ್ ನ ಇನ್ಸ್ಟಾಗ್ರಾಂ ಮಾಡೆಲ್ ಕ್ರಿಸ್ ಗಲೇರಾ ಪ್ರೀತಿ ಮಾಡಿ ಮೋಸ ಹೋದಾಕೆ. ಈಕೆ ತನ್ನ ಜೀವನವನ್ನು ಏಕಾಂಗಿಯಾಗಿ ಬದುಕಲು ನಿರ್ಧರಿಸಿದಳು. ಮತ್ತು ತನ್ನ ಸಮಯ ಹಾಗೂ ಹಣವನ್ನು ತಾನೇ ಖರ್ಚು ಮಾಡಿದಳು. ಒಂಟಿ ಮಹಿಳೆಯಾಗಿ ಸ್ವಲ್ಪ ಸಮಯ ಕಳೆದ ನಂತರ ಆಕೆ ತನ್ನನ್ನು ತಾನೇ ಮದುವೆಯಾಗಲು ನಿರ್ಧರಿಸಿದಳು.

ತಾಲಿಬಾನಿಗಳ ಬಂದೂಕಿಗೂ ಹೆದರಲಿಲ್ಲ ಮಹಿಳೆ…! ವೈರಲ್‌ ಆಗಿದೆ ಈ ಫೋಟೋ

33 ವರ್ಷದ ರೂಪದರ್ಶಿ ಕ್ರಿಸ್ ತನ್ನನ್ನು ಪ್ರಬುದ್ಧ, ಬಲವಾದ ಮತ್ತು ದೃಢಸಂಕಲ್ಪದ ಮಹಿಳೆ ಎಂದು ಪರಿಗಣಿಸಿದ್ದಾಳೆ. ಮೊದಲಿಗೆ ಈಕೆ, ಎಲ್ಲವನ್ನೂ ಹಂಚಿಕೊಳ್ಳಬಹುದಾದ ಪಾಲುದಾರನನ್ನು ಹೊಂದಿರುವುದು ಅಗತ್ಯ ಎಂದು ಭಾವಿಸುತ್ತಿದ್ದಳು. ಆದರೆ, ಹಲವಾರು ಘಟನೆಯ ನಂತರ ಒಬ್ಬಳೇ ಇರಲು ನಿರ್ಧರಿಸದಳು.

ತನ್ನ ಸ್ನೇಹಿತರೊಂದಿಗೆ ಮದುವೆಯ ದಿನವನ್ನು ಆನಂದಿಸಿದಳು. ತನ್ನನ್ನು ತಾನೇ ಮದುವೆಯಾಗಿರುವುದು ಅದ್ಭುತ ಎಂದೇ ಪರಿಗಣಿಸಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...