alex Certify Watch | ಷೋ‌ ರೂಮ್​ನಿಂದ ಕಾರು ತರುವಾಗಲೇ ಆಯ್ತು ಎಡವಟ್ಟು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch | ಷೋ‌ ರೂಮ್​ನಿಂದ ಕಾರು ತರುವಾಗಲೇ ಆಯ್ತು ಎಡವಟ್ಟು….!

ಕಾರನ್ನು ಚಾಲನೆ ಮಾಡುವಾಗ ಹೆಚ್ಚಿನ ಕಾಳಜಿ ಅವಶ್ಯಕತೆ ಇದೆ. ಕೆಲವೊಂದು ನಿಯಮಗಳನ್ನು ಪಾಲನೆ ಮಾಡಬೇಕಿದೆ.

ಆದರೆ ಹೊಚ್ಚಹೊಸ ಫೋಕ್ಸ್‌ ವ್ಯಾಗನ್ ವರ್ಟಸ್​ ಖರೀದಿಸಿದ ಸಮಯದಲ್ಲಿ ಅದನ್ನು ಖರೀದಿ ಮಾಡಿದ ಮಾಲೀಕನಿಗೆ ಹಾನಿ ಅಷ್ಟಿಷ್ಟಲ್ಲ. ಕಾರನ್ನು ಖರೀದಿಸಿ ಷೋರೂಮ್​ನಿಂದ ತರುತ್ತಿರುವಾಗಲೇ ಭಾರಿ ಅಪಘಾತ ಸಂಭವಿಸಿದೆ. ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಈ ದುರ್ಘಟನೆ ನಡೆದಿದೆ.

ಷೋ ರೂಂ, ರಸ್ತೆಗಿಂತ ಎತ್ತರದಲ್ಲಿದ್ದು, ಕಾರು ಚಾಲಕ ಹೊಸದಾಗಿ ಪಡೆದ ವಾಹನಗಳ ಅಳತೆಯನ್ನು ತಪ್ಪಾಗಿ ಲೆಕ್ಕ ಹಾಕಿದ್ದರಿಂದ ಈ ದುರ್ಘಟನೆ ನಡೆದಿದೆ. ಇದರ ಪರಿಣಾಮವಾಗಿ, ಕಾರು ಷೋ ರೂಮಿನ ಪ್ಲಾಟ್‌ಫಾರ್ಮ್‌ನಿಂದ ದೂರ ಹೋಗಿ ಅಪ್ಪಳಿಸಿದೆ. ಈ ಅಪಘಾತದಲ್ಲಿ ಚಾಲಕನ ಮೂಗಿಗೆ ಭಾರಿ ಗಾಯಗಳಾಗಿವೆ.

ಚಿತ್ರಗಳಲ್ಲಿ ಗೋಚರಿಸುವಂತೆ, ಈ ವರ್ಟಸ್‌ನ ಮುಂಭಾಗದ ಬಂಪರ್ ಹಾನಿಗೊಳಗಾಗಿದೆ, ಬಾನೆಟ್ ಕೂಡ ಜಜ್ಜಿ ಹೋಗಿದೆ. ಸೆಡಾನ್ ಒಟ್ಟು 6 ಟ್ರಿಮ್‌ಗಳಲ್ಲಿ ಮಾರಾಟದಲ್ಲಿದೆ, ಅವುಗಳೆಂದರೆ ಕಂಫರ್ಟ್‌ಲೈನ್, ಹೈಲೈನ್, ಹೈಲೈನ್ ಎಟಿ, ಟಾಪ್‌ಲೈನ್, ಟಾಪ್‌ಲೈನ್ ಎಟಿ, ಜಿಟಿ ಪ್ಲಸ್. ಈಗ ಕಾರು ಓಡಿಸುವ ಮುನ್ನವೇ ರಿಪೇರಿಗೆ ಹೋಗುವ ದುರಂತ ಸಂಭವಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...