ಬೆಂಗಳೂರು: ಬಿಪಿಎಲ್ ಕಾರ್ಡ್ ದಾರರಿಗೆ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಕಾರ್ಡ್ ತಿದ್ದುಪಡಿಗೆ 3.18 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ.
ಒಂದು ತಿಂಗಳಲ್ಲಿ ಹೊಸ ತಿದ್ದುಪಡಿಗೆ 53,219 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಕಾರ್ಡ್ ತಿದ್ದುಪಡಿಗೆ ಒಟ್ಟು 3.70 ಲಕ್ಷ ಅರ್ಜಿಗಳ ಸಲ್ಲಿಕೆಯಾಗಿವೆ. ಈ ಪೈಕಿ 1.17 ಲಕ್ಷ ಕಾರ್ಡ್ ತಿದ್ದುಪಡಿ ಮಾಡಲಾಗಿದೆ. 3.70 ಲಕ್ಷ ಅರ್ಜಿಗಳ ಪೈಕಿ 93,362 ಬಿಪಿಎಲ್ ಕಾರ್ಡ್ ತಿರಸ್ಕೃತಗೊಂಡಿವೆ.
ಹೆಸರು ಬದಲಾವಣೆ, ಸೇರ್ಪಡೆಗೆ ಮಾತ್ರ ಅವಕಾಶವಿತ್ತು. 1.17 ಲಕ್ಷ ಕಾರ್ಡ್ ಗಳ ತಿದ್ದುಪಡಿಗೆ ಮಾತ್ರ ಸಮ್ಮತಿಸಲಾಗಿದೆ. 93,362 ಕಾರ್ಡ್ ತಿರಸ್ಕೃತಗೊಂಡಿವೆ ಎಂದು ಹೇಳಲಾಗಿದೆ.