ರೆಸ್ಟೋರೆಂಟ್ ಒಳಗೆ ತಿಂದ ತಿಂಡಿಯೊಂದು ನೆತ್ತೆಗೇರಿ ಕುಸಿದು ಬೀಳುತ್ತಿದ್ದ ಹುಡುಗನೊಬ್ಬನ ಜೀವ ಉಳಿಸುತ್ತಿರುವ ವ್ಯಕ್ತಿಯೊಬ್ಬನ ವಿಡಿಯೋ ವೈರಲ್ ಆಗಿದೆ. ಅಮೆರಿಕದ ವಿಸ್ಕಾನ್ಸಿನ್‌ನ ರೆಸ್ಟೋರೆಂಟ್ ಒಂದರಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮೆರಾ ಈ ದೃಶ್ಯ ಸೆರೆ ಹಿಡಿದಿದೆ.
ಜೋಸೆಫ್ ರೀನ್‌ಹಾರ್ಟ್ ಹೆಸರಿನ ವ್ಯಕ್ತಿ ಆ ಹುಡುಗನ ಜೀವವನ್ನು ಉಳಿಸಿದ್ದಾರೆ. ಚಿಕನ್ ಸ್ಯಾಂಡ್‌ವಿಚ್ ಒಂದು ಗಂಟಲಿಗೆ ಸಿಕ್ಕಿಕೊಂಡು ಕುಸಿದು ಬೀಳುತ್ತಿದ್ದ ಹುಡುಗನನ್ನು ಈ ಕ್ಲಿಪ್‌ನಲ್ಲಿ ನೋಡಬಹುದಾಗಿದೆ. ಸ್ಥಳದಲ್ಲಿಯೇ ಇದ್ದ ಜೋಸೆಫ್ ಕೂಡಲೇ ಸಮಯಪ್ರಜ್ಞೆ ಮೆರೆದು ಬಾಲಕನ ಗಂಟಲಿಗೆ ಸಿಕ್ಕಿಕೊಂಡಿದ್ದ ಸ್ಯಾಂಡ್‌ವಿಚ್ ತುಂಡನ್ನು ಕೆಳಗೆ ಬೀಳಿಸಿ, ಆತನನ್ನು ರಕ್ಷಿಸಿದ್ದಾರೆ.
555 ರೇಜರ್ ನಷ್ಟು ಚೂಪಾಗಿರುತ್ತದೆ ಪರಭಕ್ಷಕ ಮೀನುಗಳ ಹಲ್ಲು: ಹೊಸ ಅಧ್ಯಯನದಿಂದ ಬಹಿರಂಗ
ಹೆಮ್ಲಿಚ್ ಚಮತ್ಕಾರದ ಮೂಲಕ ಈತ ಬಾಲಕನ ಬಾಯಿಗೆ ಸಿಕ್ಕಿಕೊಂಡಿದ್ದ ಸ್ಯಾಂಡ್‌ವಿಚ್ ಅನ್ನು ಬೀಳಿಸಿದ್ದಾರೆ. ಬಾಲಕನ ಬಾಯಿಯಿಂದ ಸಿಕ್ಕಿಕೊಂಡಿದ್ದ ಸ್ಯಾಂಡ್‌ವಿಚ್ ಅನ್ನು ಬೀಳಿಸಿದ್ದಾರೆ ಹಳದಿ ಶರ್ಟ್‌ಧಾರಿ ಹೀರೋ.
ಈ ವಿಡಿಯೋವನ್ನು 2500 ಬಾರಿ ವೀಕ್ಷಿಸಲಾಗಿದ್ದು, ಬಾಲಕನನ್ನು ರಕ್ಷಿಸಿದಾತನನ್ನು ನೆಟ್ಟಿಗರು ಪ್ರಶಂಸಿಸಿದ್ದಾರೆ.