alex Certify ಅಧಿಕಾರಿಗಳಿಗೂ ತಿಳಿಸದೇ ಗೌಪ್ಯವಾಗಿ ಗೆಳತಿಯನ್ನು ಮದುವೆಯಾದ ಪ್ರಧಾನಿ ಬೋರಿಸ್ ಜಾನ್ಸನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಧಿಕಾರಿಗಳಿಗೂ ತಿಳಿಸದೇ ಗೌಪ್ಯವಾಗಿ ಗೆಳತಿಯನ್ನು ಮದುವೆಯಾದ ಪ್ರಧಾನಿ ಬೋರಿಸ್ ಜಾನ್ಸನ್

ಲಂಡನ್: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತಮ್ಮ ಪ್ರೇಯಸಿ ಕ್ಯಾರೀ ಸೈಮಂಡ್ಸ್ ಅವರನ್ನು ಗೌಪ್ಯವಾಗಿ ಮದುವೆಯಾಗಿದ್ದಾರೆ.

ಶನಿವಾರ ವೆಸ್ಟ್ ಮಿನಿಸ್ಟರ್ ಚರ್ಚ್ ನಲ್ಲಿ 56 ವರ್ಷದ ಬೋರಸ್ ಜಾನ್ಸನ್, ಪ್ರೇಯಸಿ 33 ವರ್ಷದ ಕ್ಯಾರಿ ಸೈಮಂಡ್ಸ್ ಅವರನ್ನು ವಿವಾಹವಾಗಿದ್ದಾರೆ. ಶನಿವಾರ ಮಧ್ಯಾಹ್ನ ಸ್ಥಳೀಯ ಕಾಲಮಾನ 1.30 ರ ಬೆಳಗ್ಗೆ ಕ್ಯಾಥೊಲಿಕ್ ಪಂಗಡದ ಕ್ಯಾಥೆಡ್ರಲ್ ಚರ್ಚ್ ದಿಢೀರ್ ಮುಚ್ಚಲಾಯಿತು.

ಮದು ಮಗಳ ಉಡುಗೆಯಲ್ಲಿ ಕ್ಯಾರಿ ಸೈಮಂಡ್ಸ್ ಆಗಮಿಸಿದ್ದು ಬೋರಿಸ್ ಜಾನ್ಸನ್ ಕೂಡ ಬಂದಿದ್ದಾರೆ. ಸರಳವಾಗಿ ಮದುವೆ ನೆರವೇರಿದ್ದು, ಪ್ರಧಾನಿ ಕಚೇರಿಯ ಅಧಿಕಾರಿಗಳಿಗೆ ಕೂಡ ಮಾಹಿತಿ ಇರಲಿಲ್ಲ. ಹಲವು ವರ್ಷಗಳಿಂದ ಜೊತೆಯಾಗಿ ಜೀವನ ನಡೆಸಿರುವ ಬೋರಿಸ್ ಜಾನ್ಸನ್ ಮತ್ತು ಕ್ಯಾರಿ ಸೈಮಂಡಂಡ್ಸ್ ಅವರಿಗೆ 2020 ರ ಏಪ್ರಿಲ್ನಲ್ಲಿ ಪುತ್ರ ಜನಿಸಿದ್ದು, ನಂತರದಲ್ಲಿ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಬೋರಿಸ್ ಜಾನ್ಸನ್ ಗೆ ಇದು ಎರಡನೇ ಮದುವೆಯಾಗಿದೆ. ವಕೀಲೆ ಮರಿನಾ ವೀಲರ್ ಜೊತೆಗಿನ ಮೊದಲ ವಿವಾಹ 2018 ರಲ್ಲಿ ಮುರಿದುಬಿದ್ದಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...