alex Certify ರೈತರ ಪ್ರತಿಭಟನೆಯನ್ನು ಪಾಕ್​ ವಿವಾದ ಎಂದು ತಪ್ಪಾಗಿ ಅರ್ಥೈಸಿಕೊಂಡ ಬ್ರಿಟನ್​ ಪ್ರಧಾನಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರ ಪ್ರತಿಭಟನೆಯನ್ನು ಪಾಕ್​ ವಿವಾದ ಎಂದು ತಪ್ಪಾಗಿ ಅರ್ಥೈಸಿಕೊಂಡ ಬ್ರಿಟನ್​ ಪ್ರಧಾನಿ..!

ಭಾರತದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯನ್ನ ಭಾರತ – ಪಾಕ್​ ವಿವಾದವೆಂದು ತಪ್ಪಾಗಿ ಅರ್ಥೈಸಿಕೊಂಡ ಯುಕೆ ಪ್ರಧಾನಿ ಬೋರಿಸ್​ ಜಾನ್ಸನ್​ ಪೇಚಿಗೆ ಸಿಲುಕಿದ್ದಾರೆ.

ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಜಾನ್ಸನ್​, ಭಾರತ ಹಾಗೂ ಪಾಕಿಸ್ತಾನದ ನಡುವೆ ಏನು ನಡೆಯುತ್ತಿದೆ ಅನ್ನೋದರ ಬಗ್ಗೆ ನಮಗೆ ಗಂಭೀರ ಕಾಳಜಿ ಇದೆ ಎಂದಿದ್ದಾರೆ.

ಸಿಖ್​ ಧರ್ಮದ ಸಂಸ್ಥಾಪಕ ಗುರುನಾನಕ್​ರ ಜಯಂತಿ ಪ್ರಯುಕ್ತ ಆಯೋಜಿಸಲಾಗಿದ್ದ ಝೂಮ್​ ಸಭೆಯಲ್ಲಿ ಕೆನಡಾದಲ್ಲಿರುವ ಸಿಖ್​ರನ್ನ ಉದ್ದೇಶಿಸಿ ಮಾತನಾಡಿದ್ದ ಕೆನಡಾ ಪ್ರಧಾನಿ ಜಸ್ಟೀನ್​ ಟ್ರುಡೋ ಶಾಂತಿಯುತ ಪ್ರತಿಭಟನೆಯ ಹಕ್ಕನ್ನ ರಕ್ಷಿಸಲು ಕೆನಡಾ ಯಾವಾಗಲು ಮುಂದಿರುತ್ತೆ ಎಂದು ಹೇಳಿದ್ದರು.

ಇದನ್ನ ತಪ್ಪಾಗಿ ಅರ್ಥೈಸಿಕೊಂಡ ಬೋರಿಸ್​ ಜಾನ್ಸನ್​, ಭಾರತ ಹಾಗೂ ಪಾಕ್​ ನಡುವಿನ ಘರ್ಷಣೆಯಿಂದಾಗಿ ಪ್ರತಿಭಟನೆ ನಡೆಯುತ್ತಿದೆ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.
ಬ್ರಿಟಿಷ್​ ಸಂಸದ ತನ್ಮಂಜೀತ್​ ಸಿಂಗ್​ಗೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಬೋರಿಸ್​ ಜಾನ್ಸನ್​ ಈ ಎಡವಟ್ಟನ್ನ ಮಾಡಿದ್ದಾರೆ. ನೀವು ಭೂಮಿ ಮೇಲೆ ಇದ್ದೀರೋ … ಇಲ್ಲವೇ ಬಾಹ್ಯಾಕಾಶದಲ್ಲೋ ಅಂತಾ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಬೋರಿಸ್​ ಜಾನ್ಸನ್​ ಎಡವಟ್ಟಿಗೆ ತನ್ಮಂಜೀತ್​ ಸಿಂಗ್​ ಕೂಡ ಇದು ಬ್ರಿಟನ್​ ತಲೆತಗ್ಗಿಸುವಂತ ಸಂಗತಿಯಾಗಿದೆ ಅಂತಾ ಟ್ವೀಟಾಯಿಸಿದ್ದಾರೆ.

— Tanmanjeet Singh Dhesi MP (@TanDhesi) December 9, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...