ರೈತರ ಪ್ರತಿಭಟನೆಯನ್ನು ಪಾಕ್ ವಿವಾದ ಎಂದು ತಪ್ಪಾಗಿ ಅರ್ಥೈಸಿಕೊಂಡ ಬ್ರಿಟನ್ ಪ್ರಧಾನಿ..! 10-12-2020 5:24PM IST / No Comments / Posted In: Latest News, Live News, International ಭಾರತದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯನ್ನ ಭಾರತ – ಪಾಕ್ ವಿವಾದವೆಂದು ತಪ್ಪಾಗಿ ಅರ್ಥೈಸಿಕೊಂಡ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಪೇಚಿಗೆ ಸಿಲುಕಿದ್ದಾರೆ. ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಜಾನ್ಸನ್, ಭಾರತ ಹಾಗೂ ಪಾಕಿಸ್ತಾನದ ನಡುವೆ ಏನು ನಡೆಯುತ್ತಿದೆ ಅನ್ನೋದರ ಬಗ್ಗೆ ನಮಗೆ ಗಂಭೀರ ಕಾಳಜಿ ಇದೆ ಎಂದಿದ್ದಾರೆ. ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ರ ಜಯಂತಿ ಪ್ರಯುಕ್ತ ಆಯೋಜಿಸಲಾಗಿದ್ದ ಝೂಮ್ ಸಭೆಯಲ್ಲಿ ಕೆನಡಾದಲ್ಲಿರುವ ಸಿಖ್ರನ್ನ ಉದ್ದೇಶಿಸಿ ಮಾತನಾಡಿದ್ದ ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡೋ ಶಾಂತಿಯುತ ಪ್ರತಿಭಟನೆಯ ಹಕ್ಕನ್ನ ರಕ್ಷಿಸಲು ಕೆನಡಾ ಯಾವಾಗಲು ಮುಂದಿರುತ್ತೆ ಎಂದು ಹೇಳಿದ್ದರು. ಇದನ್ನ ತಪ್ಪಾಗಿ ಅರ್ಥೈಸಿಕೊಂಡ ಬೋರಿಸ್ ಜಾನ್ಸನ್, ಭಾರತ ಹಾಗೂ ಪಾಕ್ ನಡುವಿನ ಘರ್ಷಣೆಯಿಂದಾಗಿ ಪ್ರತಿಭಟನೆ ನಡೆಯುತ್ತಿದೆ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಬ್ರಿಟಿಷ್ ಸಂಸದ ತನ್ಮಂಜೀತ್ ಸಿಂಗ್ಗೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಬೋರಿಸ್ ಜಾನ್ಸನ್ ಈ ಎಡವಟ್ಟನ್ನ ಮಾಡಿದ್ದಾರೆ. ನೀವು ಭೂಮಿ ಮೇಲೆ ಇದ್ದೀರೋ … ಇಲ್ಲವೇ ಬಾಹ್ಯಾಕಾಶದಲ್ಲೋ ಅಂತಾ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಬೋರಿಸ್ ಜಾನ್ಸನ್ ಎಡವಟ್ಟಿಗೆ ತನ್ಮಂಜೀತ್ ಸಿಂಗ್ ಕೂಡ ಇದು ಬ್ರಿಟನ್ ತಲೆತಗ್ಗಿಸುವಂತ ಸಂಗತಿಯಾಗಿದೆ ಅಂತಾ ಟ್ವೀಟಾಯಿಸಿದ್ದಾರೆ. Many were horrified to see water cannon, tear gas and brute force being used against farmers peacefully protesting in India about #FarmersBill2020. Everyone has the fundamental right to protest peacefully. But it might help if our PM actually knew what he was talking about! pic.twitter.com/EvqGHMhW0Y — Tanmanjeet Singh Dhesi MP (@TanDhesi) December 9, 2020 https://twitter.com/Ice_Ruban/status/1336698936187359234