ಕೆಲಸದ ಮೊದಲ ದಿನವೇ, ಬೋರ್ ಆದ ಸೆಕ್ಯೂರಿಟಿ ಗಾರ್ಡ್ ಒಂದು ಮಿಲಿಯನ್ ಅಂದ್ರೆ 7.47 ಕೋಟಿ ರೂಪಾಯಿ ಮೌಲ್ಯದ ಪೇಂಟಿಂಗ್ ಅನ್ನು ಹಾಳುಮಾಡಿದ್ದಾನೆ. ಆತ, ಮುಖವಿಲ್ಲದ ವ್ಯಕ್ತಿಗಳ ಪೇಂಟಿಂಗ್ ಮೇಲೆ ಬಾಲ್ ಪಾಯಿಂಟ್ ಪೆನ್ನಿಂದ ಕಣ್ಣುಗಳನ್ನ ಬರೆದಿದ್ದಾನೆಂದು ಆರೋಪಿಸಲಾಗಿದೆ.
ಪಶ್ಚಿಮ-ಮಧ್ಯ ರಷ್ಯಾದ ಸ್ವೆರ್ಡ್ಲೋವ್ಸ್ಕ್ ಒಬ್ಲಾಸ್ಟ್ ಪ್ರದೇಶದ ಯೆಲ್ಟ್ಸಿನ್ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಟ್ರೆಟ್ಯಾಕೋವ್ ಗ್ಯಾಲರಿ ಸಂಗ್ರಹದ ಅನ್ನಾ ಲೆಪೋರ್ಸ್ಕಯಾ ಅವರ “ಥ್ರೀ ಫಿಗರ್ಸ್”(1932-34) ಎಂಬ ಪೇಂಟಿಂಗ್‌ನಲ್ಲಿ ಚಿತ್ರಿಸಿರುವ ಮೂರು ವ್ಯಕ್ತಿಗಳ ಪೈಕಿ ಇಬ್ಬರ ಮುಖದ ಮೇಲೆ, ಕೆಲಸ ಮಾಡುತ್ತಾ ಬೇಸರಗೊಂಡಿದ್ದ ಸೆಕ್ಯೂರಿಟಿ ಗಾರ್ಡ್ ಬಾಲ್ ಪಾಯಿಂಟ್ ಪೆನ್‌ನಿಂದ ಕಣ್ಣುಗಳನ್ನು ಚಿತ್ರಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಕಳ್ಳತನ ಮಾಡೋಕೆ ಬಂದವನು ದೇವರ ದರ್ಶನವಾಗುತ್ತಿದ್ದಂತೆ ಕೈ ಮುಗಿದು ವಾಪಾಸ್….!
ಘಟನೆಗೆ ಕಾರಣರಾದವರ, ಹೆಸರು ಹೇಳಲಿಚ್ಛಿಸದ ಖಾಸಗಿ ಕಂಪನಿಯು ಅವರಿಗೆ 60 ವರ್ಷ ವಯಸ್ಸಾಗಿದೆ. ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ತಿಳಿಸಿದೆ. ಈ ವರ್ಣಚಿತ್ರವನ್ನು ಡಿಸೆಂಬರ್ 7, 2021 ರಂದು ‘ದಿ ವರ್ಲ್ಡ್ ಆಸ್ ನಾನ್-ಆಬ್ಜೆಕ್ಟಿವಿಟಿ, ದಿ ಬರ್ತ್ ಆಫ್ ಎ ನ್ಯೂ ಆರ್ಟ್’ ಪ್ರದರ್ಶನದಲ್ಲಿ ಪ್ರದರ್ಶಿಸಲಾಯಿತು. ಘಟನೆಯ ಬಗ್ಗೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ
ಒಂದು ವೇಳೆ ಪೊಲೀಸರು ಕೃತ್ಯ ಎಸಗಿರುವ ಸೆಕ್ಯೂರಿಟಿ ಗಾರ್ಡ್ ಅನ್ನು ಬಂಧಿಸಿದರೆ, ಒಂದು ವರ್ಷ ಕಠಿಣ ಶಿಕ್ಷೆ ಹಾಗೂ RUB-40,000 (39,900ರೂ.) ದಂಡ ತೆರಬೇಕಾಗುತ್ತದೆ. ಇನ್ನು ಸೆಕ್ಯೂರಿಟಿ ಗಾರ್ಡ್ ನ ಎಡವಟ್ಟಿನಿಂದ RUB 250,000 (2,49,500 ರೂ.) ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಚಿತ್ರಕಲೆಯ ಮೌಲ್ಯ ಎಷ್ಟು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಆಲ್ಫಾ ವಿಮಾ ಕಂಪನಿಯಲ್ಲಿ RUB 74.9 ಮಿಲಿಯನ್ (7.47 ಕೋಟಿ ರೂ.) ಗೆ ವಿಮೆ ಮಾಡಲಾಗಿದೆ. ಈ ಹಾನಿಯನ್ನು ಭದ್ರತಾ ಕಂಪನಿಯು ಪಾವತಿಸುತ್ತಿದೆ ಎಂದು ವರದಿಯಾಗಿದೆ.
ಘಟನೆ ನಡೆದ ಮರುದಿನವೇ ಸ್ಟೇಟ್ ಟ್ರೆಟ್ಯಾಕೋವ್ ಗ್ಯಾಲರಿಯ ಪುನಃಸ್ಥಾಪಕರು ಪರಿಶೀಲಿಸಿ, ಪೇಂಟಿಂಗ್ ಅನ್ನು ಮಾಸ್ಕೋಗೆ ಕಳುಹಿಸಿದ್ದಾರೆ. ತಜ್ಞರು ಚಿತ್ರಕಲೆಯನ್ನು ಅದರ ಹಿಂದಿನ ವೈಭವಕ್ಕೆ ಮರುಸ್ಥಾಪಿಸುವ ಪ್ರಯತ್ನ ನಡೆಸುತ್ತಿದ್ದಾರೆ.
ಚಿತ್ರಕಲೆಗಾದ ಹಾನಿಯನ್ನು ಯಾವುದೇ ಪರಿಣಾಮಗಳಿಲ್ಲದೆ ತೆಗೆದುಹಾಕಬಹುದು ಎಂದು ತಜ್ಞರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಆಂತರಿಕ ತನಿಖೆ ಮತ್ತು ಕಾನೂನು ತನಿಖೆ ಜಾರಿಯಾಗಿರುವುದರಿಂದ ಯೆಲ್ಟ್ಸಿನ್ ಕೇಂದ್ರವು ಈ ಬಗ್ಗೆ ಇನ್ನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.