alex Certify BIG NEWS: ನಾಳೆಯಿಂದ ದೇಶಾದ್ಯಂತ ನೋಂದಣಿ ಇಲ್ಲದೇ ಮೂರನೇ ಡೋಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಾಳೆಯಿಂದ ದೇಶಾದ್ಯಂತ ನೋಂದಣಿ ಇಲ್ಲದೇ ಮೂರನೇ ಡೋಸ್

ನವದೆಹಲಿ: ಜನವರಿ 10 ರಿಂದ ದೇಶಾದ್ಯಂತ ಕೊರೋನಾ ಲಸಿಕೆಯ ಮೂರನೇ ಡೋಸ್ ಲಸಿಕೆ ನೀಡಲಾಗುತ್ತದೆ. ಈ ಬೂಸ್ಟರ್ ಡೋಸ್ ಪಡೆಯಲು ನೋಂದಣಿ ಅಗತ್ಯ ಇರುವುದಿಲ್ಲ.

ಲಸಿಕೆಗಾಗಿ ಮೊದಲೇ ನೋಂದಣಿ ಮಾಡಿಕೊಳ್ಳುವ ಅಗತ್ಯವಿರುವುದಿಲ್ಲ. ನೇರವಾಗಿ ಲಸಿಕ ಕೇಂದ್ರಕ್ಕೆ ತೆರಳಿ ಬೂಸ್ಟರ್ ಡೋಸ್ ಪಡೆದುಕೊಳ್ಳಬಹುದಾಗಿದೆ. 60 ವರ್ಷ ಮೇಲ್ಪಟ್ಟವರು ಮತ್ತು ಕೊರೋನಾ ವಾರಿಯರ್ಸ್, ಹೆಲ್ತ್ ವರ್ಕರ್ಸ್ ಗಳಿಗೆ ಜನವರಿ 10 ರಿಂದ ಬೂಸ್ಟರ್ ಡೋಸ್ ನೀಡಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಈ ಕುರಿತಾಗಿ ಮಾಹಿತಿ ನೀಡಲಾಗಿದೆ.

ಆರೋಗ್ಯ ಕಾರ್ಯಕರ್ತರು, ಮುಂಚೂಣಿಯ ಕಾರ್ಯಕರ್ತರು ಮತ್ತು 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಬಗ್ಗೆ ಮಹತ್ವದ ಮಾಹಿತಿ ನೀಡಿರುವ ಕೇಂದ್ರ ಸರ್ಕಾರ ಲಸಿಕೆಗಳ ಮಿಶ್ರಣ ಮಾಡಬಾರದು ಎಂದು ಸ್ಪಷ್ಟಪಡಿಸಿದೆ.

ಕೋವಾಕ್ಸಿನ್ ಪಡೆದವರು ಕೋವಾಕ್ಸಿನ್ ಸ್ವೀಕರಿಸುತ್ತಾರೆ. ಕೋವಿಶೀಲ್ಡ್‌ ಪ್ರಾಥಮಿಕ ಎರಡು ಡೋಸ್‌ಗಳನ್ನು ಪಡೆದವರು ಕೋವಿಶೀಲ್ಡ್ ಅನ್ನು ಸ್ವೀಕರಿಸುತ್ತಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...