ಕೊರೋನಾ ಸಮಸ್ಯೆ ಕಾಡುತ್ತಿರುವ ಈ ಸಮಯದಲ್ಲಿ ಸಣ್ಣ ಮಗುವಿನಿಂದ ಹಿಡಿದು ಮನೆಯ ಹಿರಿಯರ ತನಕ ಪ್ರತಿಯೊಬ್ಬರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಇಂದಿನ ಅನಿವಾರ್ಯತೆಗಳಲ್ಲಿ ಒಂದು. ಹಾಲಿನ ಕೆಲ ಉತ್ಪನ್ನಗಳಿಂದ ನೀವು ಸ್ಟ್ರಾಂಗ್ ಆಗಬಹುದು ಎಂಬುದು ನಿಮಗೆ ತಿಳಿದಿದೆಯೇ?
ಬೆಳಿಗ್ಗೆ ಎದ್ದಾಕ್ಷಣ ಹಾಗೂ ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲು ಕುಡಿಯುವುದರಿಂದ ನಿಮ್ಮ ದೇಹಕ್ಕೆ ಅಗತ್ಯವಿರುವ ವಿಟಮಿನ್ ಗಳು, ಪ್ರೊಟೀನ್ ಗಳು ಹಾಗೂ ಪೋಷಕಾಂಶಗಳು ಲಭ್ಯವಾಗುತ್ತವೆ. ಇದರಿಂದ ನಿಮ್ಮ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.
ಮಧ್ಯಾಹ್ನ ಊಟದ ವೇಳೆ ಮನೆಯಲ್ಲೇ ತಯಾರಿಸಿದ ದಪ್ಪನೆಯ ಮೊಸರು ಸೇವಿಸಿ. ಇದು ಬ್ಯಾಕ್ಟೀರಿಯಾ ಸೋಂಕು ನಿಮ್ಮನ್ನು ತಗಲುವುದನ್ನು ತಪ್ಪಿಸುತ್ತದೆ. ಮಕ್ಕಳಿಗೆ ಮೊಸರಿಗೆ ಒಂದು ಚಮಚ ಸಕ್ಕರೆ ಬೆರೆಸಿ ಲಸ್ಸಿಯಂತೆ ಸೇವಿಸಲು ಕೊಡುವುದು ಇನ್ನೂ ಒಳ್ಳೆಯದು.
ಅಧ್ಯಯನವೊಂದರ ಪ್ರಕಾರ ಚೀಸ್ ಸೇವನೆಯಿಂದ ಹಿರಿಯರ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ಉಸಿರಾಟದ ವ್ಯವಸ್ಥೆಗಳ ಅಂಗಾಂಶಗಳಿಗೆ ಶಕ್ತಿ ನೀಡುತ್ತದೆ. ದೇಹ ಚೇತರಿಸಿಕೊಳ್ಳಲು ನೆರವಾಗುತ್ತದೆ. ಆಯಾಸ ದೂರ ಮಾಡುತ್ತದೆ.