
ರಾಮನಗರ: ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹಾರೋಬೆಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ತಡೆಗೆ ತಂದಿದ್ದ ನಾಡಬಾಂಬ್ ಸಿಡಿದು ವ್ಯಕ್ತಿಯೊಬ್ಬನ ಕೈ ಛಿದ್ರವಾಗಿದೆ.
ಡಿಕೆ ನಗರದ ನಿವಾಸಿ ಸಚಿನ್ ಕುಮಾರ್(27) ಗಾಯಗೊಂಡವರು. ಹಾರೋಬೆಲೆ ಗ್ರಾಮದ ಹೊರಗೆ ಇರುವ ಒಂಟಿ ಮನೆಯಲ್ಲಿ ಕಾಡು ಪ್ರಾಣಿ ಹಾವಳಿ ತಡೆಗೆ ಇಡಲಾಗಿದ್ದ ನಾಡ ಬಾಂಬ್ ಸಿಡಿದ ಪರಿಣಾಮ ಸಚಿನ್ ಕುಮಾರ್ ಬಲಗೈ ಛಿದ್ರಚಿತ್ರವಾಗಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.