alex Certify ಹರಿಯಾಣ ಗಾಯಕಿ ಮತ್ತು ನರ್ತಕಿ ಸಪ್ನಾ ಚೌಧರಿಯ ದೇಸಿ ನೃತ್ಯಕ್ಕೆ ಅಭಿಮಾನಿಗಳು ಫಿದಾ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹರಿಯಾಣ ಗಾಯಕಿ ಮತ್ತು ನರ್ತಕಿ ಸಪ್ನಾ ಚೌಧರಿಯ ದೇಸಿ ನೃತ್ಯಕ್ಕೆ ಅಭಿಮಾನಿಗಳು ಫಿದಾ….!

ಸಪ್ನಾ ಚೌಧರಿ ಅವರು ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಮ್ ನಲ್ಲಿ 4.8 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಜನಪ್ರಿಯ ಹರಿಯಾಣ ಗಾಯಕಿ ಮತ್ತು ನರ್ತಕಿ. ಇನ್ ಸ್ಟಾಗ್ರಾಮ್ ನಲ್ಲಿ ಬಹಳ ಚಟುವಟಿಕೆಯಿಂದ ಇರುವ ಇವರು ತಮ್ಮ ಅನುಯಾಯಿಗಳಿಗೆ ನೃತ್ಯದ ರಸದೌತಣ ನೀಡುತ್ತಲೇ ಇರುತ್ತಾರೆ. ಈ ಬಾರಿ ರಾಜಸ್ಥಾನಿ ಹಾಡನ್ನು ಆಯ್ಕೆ ಮಾಡಿಕೊಂಡಿದ್ದು, ಎಂದಿನಂತೆ ವಿಡಿಯೋ ವೈರಲ್ ಆಗಿದೆ.

ಇನ್‌ಸ್ಟಾಗ್ರಾಮ್ ರೀಲ್ ವೀಡಿಯೊದಲ್ಲಿ, ಚೌಧರಿ ಜನಪ್ರಿಯ ಗೀತೆ ‘ಗೋರಿ ನಾಚೆ’ ಅನ್ನು ವಿಶಿಷ್ಟ ದೇಸಿ ಶೈಲಿಯಲ್ಲಿ ಕುಣಿದು ಅನುಯಾಯಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕೇವಲ ಒಂದೇ ದಿನದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಇಷ್ಟಪಟ್ಟಿದ್ದಾರೆ.

BIG NEWS: ಬಾಂಬೆ ಟೀಮ್ ಗೆ ಸಂಪುಟದಲ್ಲಿ ಕೋಕ್ ವಿಚಾರ: ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದ ಸಚಿವ ಮುನಿರತ್ನ

ವೀಡಿಯೊದಲ್ಲಿ ಸಪ್ನಾ ಸುಂದರವಾದ ಬಹು-ಬಣ್ಣದ ಪಟಿಯಾಲಾ ಬಟ್ಟೆ ತೊಟ್ಟು, ತಲೆ ಮತ್ತು ಅರ್ಧ ಮುಖ ಮುಚ್ಚುವಂತೆ ದುಪಟ್ಟಾ ಹಾಕಿ, ಜಡೆ ಹೆಣೆದು, ಕಾಲಿಗೆ ಕೆಂಪಾದ ರಂಗು ಹಚ್ಚಿಕೊಂಡು ಹಾಡು ಪ್ಲೇ ಆಗುತ್ತಿದ್ದಂತೆ, ಸಪ್ನಾ ಅದಕ್ಕೆ ನೃತ್ಯ ಮಾಡುವುದನ್ನು ಕಾಣಬಹುದು. ಕೆಲವು ಜಬರ್ದಸ್ತ್ ದೇಸಿ ಝಲಕ್ ಗಳನ್ನು ಹಾಡಿಗೆ ತಕ್ಕಂತೆ ನಗುಮೊಗದಿ ಹಾಡಿನ ಪದಗಳನ್ನು ಎಂಜಾಯ್ ಮಾಡುತ್ತಾ ಕುಣಿಯುವುದನ್ನು ನೋಡಬಹುದು. ಅವಳು ನೃತ್ಯ ಮಾಡುವಾಗ ಅವಳೇ ಅದರಲ್ಲಿ ಸಂಪೂರ್ಣವಾಗಿ ಮಗ್ನವಾಗುವುದನ್ನು ನೋಡುವುದೇ ಖುಷಿ.

ಸಪ್ನಾ ಚೌಧರಿ ಹರಿಯಾಣದ ಪ್ರಸಿದ್ಧ ಗಾಯಕಿ. ಇವರು ‘ತೇರಿ ಆಖ್ಯ ಕಾ ಯೋ ಕಾಜಲ್’ ಹಾಡಿನ ಮೂಲಕ ಜನಪ್ರಿಯತೆ ಗಳಿಸಿದರು. ತದನಂತರ ಸಲ್ಮಾನ್ ಖಾನ್ ನಡೆಸಿಕೊಡುವ ರಿಯಾಲಿಟಿ ಶೋ, ಬಿಗ್ ಬಾಸ್‌ನಲ್ಲಿ ಭಾಗವಹಿಸಿದ ನಂತರ ರಾಷ್ಟ್ರವ್ಯಾಪಿ ಖ್ಯಾತಿಯನ್ನು ಗಳಿಸಿದರು. ಬಿಗ್ ಬಾಸ್ ನಂತರ ಆಕೆಯ ಬದುಕೇ ಬದಲಾಯಿತು. ಅವರು ನಿಯಮಿತವಾಗಿ ಇನ್ ಸ್ಟಾಗ್ರಾಮ್ ನಲ್ಲಿ ಒಂದಲ್ಲಾ ಒಮದು ಪೋಸ್ಟ್ ಗಳ ಮೂಲಕ ಸಕ್ರೀಯರಾಗಿರುತ್ತಾರೆ. ಹರಿಯಾಣಿ, ಭೋಜ್ ಪುರಿ, ಪಂಜಾಬಿ ಮತ್ತು ಬಾಲಿವುಡ್ ಚಿತ್ರಗಳಲ್ಲಿ ಸಪ್ನಾ ಕಾಣಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...