alex Certify ʼಕೊರೊನಾʼ ಗೆದ್ದ 8 ತಿಂಗಳ ನಂತ್ರ ನೋವು ತೋಡಿಕೊಂಡ ನಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ಗೆದ್ದ 8 ತಿಂಗಳ ನಂತ್ರ ನೋವು ತೋಡಿಕೊಂಡ ನಟಿ

Malaika Arora Details Her 3-week-long Strenuous Battle with Covid Last Year

ಕೊರೊನಾ ಜನರ ಸಾವಿಗೆ ಕಾರಣವಾಗ್ತಿದೆ. ಕೊರೊನಾವನ್ನು ಲಘುವಾಗಿ ಪರಿಗಣಿಸಬೇಡಿ ಎಂದು ಈಗಾಗಲೇ ವೈದ್ಯರು ಸಾಕಷ್ಟು ಬಾರಿ ಹೇಳಿದ್ದಾರೆ. ಕೊರೊನಾವನ್ನು  ಬಾಲಿವುಡ್ ನ ಅನೇಕ ಕಲಾವಿದರು ಎದುರಿಸಿದ್ದಾರೆ. ಕೊರೊನಾ ನೆಗೆಟಿವ್ ಬಂದ ನಂತ್ರವೂ ಜನರು 6-8 ತಿಂಗಳ ಕಾಲ ಸುಸ್ತು ಸೇರಿದಂತೆ ಕೆಲ ಸಮಸ್ಯೆ ಎದುರಿಸುತ್ತಾರೆ. ಬಾಲಿವುಡ್ ನಟಿ ಮಲೈಕಾ ಅರೋರಾ 8 ತಿಂಗಳ ನಂತ್ರ ಕೊರೊನಾ ಕರಾಳತೆಯನ್ನು ಬಿಚ್ಚಿಟ್ಟಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಮಲೈಕಾ ಕೊರೊನಾಗೆ ತುತ್ತಾಗಿದ್ದರು. 8 ತಿಂಗಳ ನಂತ್ರ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹೇಳಿಕೊಂಡ ಮಲೈಕಾ, ಕೊರೊನಾ ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ದುರ್ಬಲಗೊಳಿಸಿದೆ ಎಂದಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಸೂಪರ್ ಫಿಗರ್ ಫೋಟೋ ಹಂಚಿಕೊಂಡ ಮಲೈಕಾ, ಈ ವಿಷ್ಯವನ್ನು ಹೇಳಿದ್ದಾರೆ.

ಕೊರೊನಾ ದೈಹಿಕವಾಗಿ ಎಷ್ಟು ದುರ್ಬಲಗೊಳಿಸಿತ್ತೆಂದ್ರೆ ಎರಡು ಹೆಜ್ಜೆ ನಡೆಯಲು ಸಾಧ್ಯವಾಗ್ತಿರಲಿಲ್ಲ. ಹಾಸಿಗೆ ಮೇಲೆ ಕುಳಿತುಕೊಳ್ಳುವುದು, ಕಿಟಕಿ ಬಳಿ ನಿಲ್ಲುವುದು ದೊಡ್ಡ ಸವಾಲಾಗಿತ್ತು ಎಂದಿದ್ದಾರೆ. ಕೊರೊನಾ ನೆಗೆಟಿವ್ ಬಂದ ನಂತ್ರ ನಾನು ಖುಷಿಯಾಗಿದ್ದೆ. ನಾನು ಕೊರೊನಾ ಗೆದ್ದಿದ್ದೇನೆಂಬ ಖುಷಿಯಲ್ಲಿದ್ದೆ. ಆದ್ರೆ ನೆಗೆಟಿವ್ ಬಂದ ನಂತ್ರವೂ ನನ್ನ ಮನಸ್ಸು ಹೇಳಿದ್ದನ್ನು ದೇಹ ಮಾಡ್ತಿರಲಿಲ್ಲ ಎಂದಿದ್ದಾರೆ.

ತಾಕತ್ತು ವಾಪಸ್ ಬರುವುದಿಲ್ಲವೆಂಬ ಭಯದಲ್ಲಿದ್ದೆ. ಮೊದಲ ಬಾರಿ ವರ್ಕ್ ಔಟ್ ಮಾಡುವಾಗ ತುಂಬಾ ಸಮಸ್ಯೆಯಾಯ್ತು ಎಂದು ಮಲೈಕಾ ಹೇಳಿದ್ದಾರೆ. HOPE ಎಂಬ ಪದ ನನಗೆ ಸಹಾಯಮಾಡಿದೆ. ಎಲ್ಲವೂ ಸರಿಯಾಗುತ್ತದೆ ಎಂಬ ಭರವಸೆಯಲ್ಲಿದ್ದೆ ನಾನು ಎಂದು ಮಲೈಕಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...