alex Certify ಪೂರ್ವಿಕರ ಮನೆಯನ್ನು ಬರೋಬ್ಬರಿ 23 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ ‘ಬಿಗ್ ಬಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೂರ್ವಿಕರ ಮನೆಯನ್ನು ಬರೋಬ್ಬರಿ 23 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ ‘ಬಿಗ್ ಬಿ’

ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಅಮಿತಾಬ್ ಬಚ್ಚನ್, ದೆಹಲಿಯಲ್ಲಿದ್ದ ತಮ್ಮ ಪೂರ್ವಿಕರ ಮನೆಯನ್ನು ಬರೋಬ್ಬರಿ 23 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ. ಈ ಮನೆಯ ಸಮೀಪದಲ್ಲೇ ಇದ್ದ ಕಂಪನಿಯೊಂದರ ಸಿಇಓ ಒಬ್ಬರು ಈ ಮನೆಯನ್ನು ಅಮಿತಾಬ್ ಬಚ್ಚನ್ ಅವರಿಂದ ಖರೀದಿಸಿದ್ದಾರೆ.

‘ಸೋಪಾನ್’ ಎಂಬ ಹೆಸರಿನ ಈ ಬಂಗಲೆಯಲ್ಲಿ ಚಿತ್ರರಂಗಕ್ಕೆ ಸೇರುವ ಮುನ್ನ ಅಮಿತಾಬ್ ಬಚ್ಚನ್, ತಮ್ಮ ತಂದೆ ಹರಿವಂಶರಾಯ್ ಬಚ್ಚನ್ ಹಾಗೂ ತಾಯಿ ತೇಜಿ ಬಚ್ಚನ್ ಅವರೊಂದಿಗೆ ವಾಸಿಸುತ್ತಿದ್ದರು. ಅಮಿತಾಬ್ ಬಚ್ಚನ್ ಮುಂಬೈಗೆ ಶಿಫ್ಟ್ ಆದ ಬಳಿಕವೂ ಅವರ ತಂದೆ ಮತ್ತು ತಾಯಿ ಈ ಮನೆಯಲ್ಲಿಯೇ ಇದ್ದರು.

ಮಂಗಳೂರಲ್ಲಿ ಬೆಚ್ಚಿಬೀಳಿಸುವ ಮಾಂಸದಂಧೆ: ವಿದ್ಯಾರ್ಥಿನಿಯರನ್ನು ವೇಶ್ಯಾವಾಟಿಕೆಗೆ ತಳ್ಳಿದ್ದ ಗ್ಯಾಂಗ್ ಅರೆಸ್ಟ್

ಎರಡು ಮಹಡಿಗಳಿರುವ ಈ ಬಂಗಲೆಯಲ್ಲಿ 1980 ರ ವರೆಗೂ ಹರಿವಂಶರಾಯ್ ಬಚ್ಚನ್ ಅವರು ಕವಿಗೋಷ್ಠಿಗಳನ್ನು ನಡೆಸುತ್ತಿದ್ದರು ಎನ್ನಲಾಗಿದೆ. ಅಮಿತಾಬ್ ಬಚ್ಚನ್ ಮುಂಬೈನಲ್ಲಿ ಈಗಾಗಲೇ ನಾಲ್ಕು ಬೃಹತ್ ಬಂಗಲೆಗಳನ್ನು ಹೊಂದಿದ್ದು, ಇತ್ತೀಚೆಗಷ್ಟೇ ಮತ್ತೊಂದು ಲಕ್ಷುರಿ ಅಪಾರ್ಟ್ಮೆಂಟ್ ಒಂದನ್ನು ಖರೀದಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...