ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಅಮಿತಾಬ್ ಬಚ್ಚನ್, ದೆಹಲಿಯಲ್ಲಿದ್ದ ತಮ್ಮ ಪೂರ್ವಿಕರ ಮನೆಯನ್ನು ಬರೋಬ್ಬರಿ 23 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ. ಈ ಮನೆಯ ಸಮೀಪದಲ್ಲೇ ಇದ್ದ ಕಂಪನಿಯೊಂದರ ಸಿಇಓ ಒಬ್ಬರು ಈ ಮನೆಯನ್ನು ಅಮಿತಾಬ್ ಬಚ್ಚನ್ ಅವರಿಂದ ಖರೀದಿಸಿದ್ದಾರೆ.
‘ಸೋಪಾನ್’ ಎಂಬ ಹೆಸರಿನ ಈ ಬಂಗಲೆಯಲ್ಲಿ ಚಿತ್ರರಂಗಕ್ಕೆ ಸೇರುವ ಮುನ್ನ ಅಮಿತಾಬ್ ಬಚ್ಚನ್, ತಮ್ಮ ತಂದೆ ಹರಿವಂಶರಾಯ್ ಬಚ್ಚನ್ ಹಾಗೂ ತಾಯಿ ತೇಜಿ ಬಚ್ಚನ್ ಅವರೊಂದಿಗೆ ವಾಸಿಸುತ್ತಿದ್ದರು. ಅಮಿತಾಬ್ ಬಚ್ಚನ್ ಮುಂಬೈಗೆ ಶಿಫ್ಟ್ ಆದ ಬಳಿಕವೂ ಅವರ ತಂದೆ ಮತ್ತು ತಾಯಿ ಈ ಮನೆಯಲ್ಲಿಯೇ ಇದ್ದರು.
ಮಂಗಳೂರಲ್ಲಿ ಬೆಚ್ಚಿಬೀಳಿಸುವ ಮಾಂಸದಂಧೆ: ವಿದ್ಯಾರ್ಥಿನಿಯರನ್ನು ವೇಶ್ಯಾವಾಟಿಕೆಗೆ ತಳ್ಳಿದ್ದ ಗ್ಯಾಂಗ್ ಅರೆಸ್ಟ್
ಎರಡು ಮಹಡಿಗಳಿರುವ ಈ ಬಂಗಲೆಯಲ್ಲಿ 1980 ರ ವರೆಗೂ ಹರಿವಂಶರಾಯ್ ಬಚ್ಚನ್ ಅವರು ಕವಿಗೋಷ್ಠಿಗಳನ್ನು ನಡೆಸುತ್ತಿದ್ದರು ಎನ್ನಲಾಗಿದೆ. ಅಮಿತಾಬ್ ಬಚ್ಚನ್ ಮುಂಬೈನಲ್ಲಿ ಈಗಾಗಲೇ ನಾಲ್ಕು ಬೃಹತ್ ಬಂಗಲೆಗಳನ್ನು ಹೊಂದಿದ್ದು, ಇತ್ತೀಚೆಗಷ್ಟೇ ಮತ್ತೊಂದು ಲಕ್ಷುರಿ ಅಪಾರ್ಟ್ಮೆಂಟ್ ಒಂದನ್ನು ಖರೀದಿಸಿದ್ದರು.