alex Certify ಕೈಯಲ್ಲಿ ದುಡ್ಡಿಲ್ಲವೆಂದು ಮದ್ವೆಯಾದ ಮೂರು ತಿಂಗಳಲ್ಲಿ ಪತ್ನಿಯನ್ನೇ ಮಾರಾಟ ಮಾಡಿದ ಭೂಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೈಯಲ್ಲಿ ದುಡ್ಡಿಲ್ಲವೆಂದು ಮದ್ವೆಯಾದ ಮೂರು ತಿಂಗಳಲ್ಲಿ ಪತ್ನಿಯನ್ನೇ ಮಾರಾಟ ಮಾಡಿದ ಭೂಪ

ರಾಜಸ್ಥಾನದ ಬೆಲ್ ಪಾರಾ ಪೊಲೀಸ್ ಠಾಣೆ ವ್ಯಾಪ್ತಿಯ ಸುಲೇಕೆಲಾ ಎಂಬಲ್ಲಿ ದುಡ್ಡಿಲ್ಲದ ಕಾರಣಕ್ಕೆ ಪತ್ನಿಯನ್ನೇ ವ್ಯಕ್ತಿಯೊಬ್ಬ ಮಾರಾಟ ಮಾಡಿದ್ದಾನೆ.

ಮದುವೆಯಾದ ಮೂರು ತಿಂಗಳಲ್ಲೇ ಆರೋಪಿ ಇಂತಹ ಕೃತ್ಯವೆಸಗಿದ್ದು, ಪತ್ನಿಯೇ ಹಣಕ್ಕಾಗಿ ಬೇರೆಯವರೊಂದಿಗೆ ಓಡಿ ಹೋಗಿದ್ದಾಳೆ ಎಂದು ಆರೋಪಿಸಿದ್ದಾನೆ. ಮಹಿಳೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ಸರೋಜ್ ರಾಣಾ ಎಂಬಾತನನ್ನು ಬಂಧಿಸಲಾಗಿದೆ.

ಬೋಲಂಗಿರ್ ಜಿಲ್ಲೆಯ ಮಹಿಳೆಯನ್ನು ಫೇಸ್ಬುಕ್ ಮೂಲಕ ಪರಿಚಯಿಸಿಕೊಂಡು ಪ್ರೀತಿಸಿದ್ದ ಸರೋಜ್ ಕುಟುಂಬದವರ ಒಪ್ಪಿಗೆಯೊಂದಿಗೆ ಮದುವೆಯಾಗಿದ್ದ. ಮದುವೆಯಾದ ಮೂರು ತಿಂಗಳ ನಂತರ ಸರೋಜ್ ರಾಣಾ ಪತ್ನಿಯನ್ನು ಬೇರೆ ಕಡೆ ಕೆಲಸಕ್ಕೆ ಕರೆದುಕೊಂಡು ಹೋಗುವುದಾಗಿ ರಾಯಪುರಕ್ಕೆ ತೆರಳಿದ್ದಾನೆ. ಅಲ್ಲಿಂದ ರಾಜಸ್ಥಾನದ ಹಳ್ಳಿಗೆ ತೆರಳಿ ತನ್ನ ಪತ್ನಿಯನ್ನೇ ಮಾರಾಟ ಮಾಡಿದ್ದಾನೆ. ಬಳಿಕ ಮಹಿಳೆ ಕುಟುಂಬದವರಿಗೆ ಕರೆ ಮಾಡಿ ಆಕೆ ಬೇರೆ ವ್ಯಕ್ತಿಯೊಂದಿಗೆ ಓಡಿಹೋಗಿದ್ದಾಗಿ ಸುಳ್ಳು ಹೇಳಿದ್ದಾನೆ.

ಮಹಿಳೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪತ್ನಿಯನ್ನೇ ಮಾರಾಟ ಮಾಡಿರುವುದು ಗೊತ್ತಾಗಿದೆ. ಆರೋಪಿಯನ್ನು ಬಂಧಿಸಿ, ಮಹಿಳೆಯನ್ನು ರಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...