alex Certify BIG NEWS: ನಿಗಮ -ಮಂಡಳಿ ನೇಮಕಾತಿಗೆ ಚಾಲನೆ: 25 ಶಾಸಕರು, 15 ಮುಖಂಡರಿಗೆ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಿಗಮ -ಮಂಡಳಿ ನೇಮಕಾತಿಗೆ ಚಾಲನೆ: 25 ಶಾಸಕರು, 15 ಮುಖಂಡರಿಗೆ ಅವಕಾಶ

ಬೆಂಗಳೂರು: ನಿಗಮ -ಮಂಡಳಿ ನೇಮಕಾತಿಗೆ ನವೆಂಬರ್ 21ರ ಬಳಿಕ ಚಾಲನೆ ಸಿಗಲಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಪಂಚ ರಾಜ್ಯಗಳ ಚುನಾವಣೆಯಲ್ಲಿ ಸಕ್ರಿಯರಾಗಿರುವುದರಿಂದ ನಿಗಮ- ಮಂಡಳಿ ನೇಮಕಾತಿ ವಿಳಂಬವಾಗಿದೆ.

ನವೆಂಬರ್ 21ರ ಬಳಿಕ ಸುರ್ಜೇವಾಲಾ ರಾಜ್ಯಕ್ಕೆ ಭೇಟಿ ನೀಡುವ ಸಾಧ್ಯತೆಯಿದ್ದು, ಶಾಸಕರ ಜೊತೆಗೆ ಮುಖಂಡರಿಗೂ ಮೊದಲ ಹಂತದಲ್ಲಿಯೇ ನಿಗಮ -ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಇದೆ. ಈ ಹಿಂದೆ ಮೊದಲ ಹಂತದಲ್ಲಿ ಶಾಸಕರಿಗೆ ಮಾತ್ರ ನಿಗಮ -ಮಂಡಳಿ ಹುದ್ದೆ ನೀಡಲು ಯೋಚಿಸಲಾಗಿತ್ತು. ಆದರೆ, ತೀವ್ರ ಒತ್ತಡ ಹಿನ್ನೆಲೆಯಲ್ಲಿ ಪಟ್ಟು ಸಡಿಲಿಸಲಾಗಿದ್ದು, 25 ಶಾಸಕರ ಜೊತೆಗೆ 15 ಕಾರ್ಯಕರ್ತರಿಗೂ ಮೊದಲ ಹಂತದಲ್ಲಿ ನಿಗಮ -ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಇದೆ. ರಾಜ್ಯಕ್ಕೆ ಸುರ್ಜೇವಾಲಾ ಆಗಮಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೊದಲಾದ ನಾಯಕರು ನಿಗಮ -ಮಂಡಳಿ ನೇಮಕವಾಗುವ ಶಾಸಕರು ಹಾಗೂ ಮುಖಂಡರ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ. ಈ ತಿಂಗಳ ಅಂತ್ಯದೊಳಗೆ ಮೊದಲ ಹಂತದ ನಿಗಮ –ಮಂಡಳಿ ನೇಮಕಾತಿ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...