ಭಾರತದಲ್ಲಿ BMW X3ಯ ಡೀಸೆಲ್ ರೂಪಾಂತರವನ್ನು ರೂ. 65,50,000 (ಎಕ್ಸ್ ಶೋ ರೂಂ) ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಐಷಾರಾಮಿ ಆವೃತ್ತಿಯಾಗಿ ಪರಿಚಯಿಸಲಾಗಿರುವ, ಹೊಸ BMW X3 ಎಕ್ಸ್‌ಡ್ರೈವ್ 20ಡಿ ಅನ್ನು ಚೆನ್ನೈನಲ್ಲಿರುವ ಬಿಎಂಡಬ್ಲ್ಯೂ ಸಮೂಹದ ಘಟಕದಲ್ಲಿ ಉತ್ಪಾದಿಸಲಾಗಿದೆ. ಅದಾಗಲೇ ಚಾಲ್ತಿಯಲ್ಲಿರುವ ಕಾರಿನ ಎರಡು ಪೆಟ್ರೋಲ್ ರೂಪಾಂತರಗಳಿಗೆ ಹೆಚ್ಚುವರಿಯಾಗಿ ಇಂದಿನಿಂದ ಡೀಸೆಲ್ ಆವೃತ್ತಿಯು ಡೀಲರ್‌ಶಿಪ್‌ಗಳಲ್ಲಿ ಲಭ್ಯವಿರಲಿದೆ.
ಹೊಸ ವಿನ್ಯಾಸ ಮತ್ತು ಸುಧಾರಿತ ಡ್ರೈವಿಂಗ್ ಕಾರ್ಯಕ್ಷಮತೆಯು BMW X3 ಅನ್ನು ಐಷಾರಾಮಿ ಕಾರನ್ನಾಗಿ ಮಾಡಿದ್ದು, ಈ ಕಾರು ಮುಖ್ಯ ರಸ್ತೆಯಲ್ಲಿ ಮತ್ತು ಆಫ್-ರೋಡ್ ಎರಡರಲ್ಲೂ ಚುರುಕಾಗಿರುತ್ತದೆ. BMW ಟ್ವಿನ್‌ಪವರ್ ಟರ್ಬೊ ತಂತ್ರಜ್ಞಾನದೊಂದಿಗೆ, ಡೀಸೆಲ್ ಎಂಜಿನ್‌ಗಳು ಉತ್ತಮ ದಕ್ಷತೆಯೊಂದಿಗೆ ಗರಿಷ್ಠ ಶಕ್ತಿ ಉತ್ಪಾದಿಸುತ್ತವೆ ಹಾಗೂ ಕಡಿಮೆ ಎಂಜಿನ್ ವೇಗದಲ್ಲಿ ಸಹ ಸ್ವಯಂಪ್ರೇರಿತ ಪ್ರತಿಕ್ರಿಯೆ ಕೊಡುತ್ತದೆ.
ಸಮುದ್ರದಾಳದಲ್ಲಿ ಪತ್ತೆಯಾಯ್ತು ಬಲು ಅಪರೂಪದ ಮರಿ ಘೋಸ್ಟ್ ಶಾರ್ಕ್..!
ಹೊಸ BMW X3 ಈ ಮೆಟಾಲಿಕ್ ಪೇಂಟ್‌ವರ್ಕ್‌ಗಳಲ್ಲಿ ಲಭ್ಯವಿದೆ — ಮಿನರಲ್ ವೈಟ್, ಫೈಟೋನಿಕ್ ಬ್ಲೂ, ಬ್ರೂಕ್ಲಿನ್ ಗ್ರೇ, ಸೋಫಿಸ್ಟೊ ಗ್ರೇ, ಬ್ಲ್ಯಾಕ್ ಸಫೈರ್ ಮತ್ತು ಕಾರ್ಬನ್ ಬ್ಲಾಕ್.
BMW X3 ಎಕ್ಸ್‌ಡ್ರೈವ್ 20ಡಿ ಎರಡು-ಲೀಟರ್‌ನ ನಾಲ್ಕು-ಸಿಲಿಂಡರ್‌ನ ಡೀಸೆಲ್ ಎಂಜಿನ್ ಮೂಲಕ 140 ಕಿವ್ಯಾ 190ಎಚ್‌ಪಿ ಮತ್ತು 1,750-2,500 rpm ನಲ್ಲಿ 400 ಎನ್‌ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಕಾರು ಕೇವಲ 7.9 ಸೆಕೆಂಡ್‌ಗಳಲ್ಲಿ ಗಂಟೆಗೆ 0 -100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ ಮತ್ತು ಗರಿಷ್ಠ ವೇಗ ಗಂಟೆಗೆ 213 ಕಿಮೀ ತಲುಪಬಲ್ಲದಾಗಿದೆ.
BMW ಸರ್ವಿಸ್ ಇನ್ ಕ್ಲುಸಿವ್ ಮತ್ತು BMW ಸರ್ವಿಸ್ ಇನ್ ಕ್ಲುಸಿವ್ ಪ್ಲಸ್ BMW X3 ಜೊತೆಗೆ ಐಚ್ಛಿಕವಾಗಿ ಲಭ್ಯವಿದೆ. ಈ ಸೇವಾ ಪ್ಯಾಕೇಜ್‌ಗಳು 3 ವರ್ಷಗಳು / 40,000 ಕಿಮೀಗಳಿಂದ 10 ವರ್ಷಗಳು / 2,00,000 ಕಿಮೀವರೆಗಿನ ಯೋಜನೆಗಳ ಆಯ್ಕೆಯೊಂದಿಗೆ ಷರತ್ತು ಆಧಾರಿತ ಸೇವೆ (ಸಿಬಿಎಸ್) ಮತ್ತು ನಿರ್ವಹಣಾ ಕಾರ್ಯಗಳನ್ನು ಒಳಗೊಂಡಿರುತ್ತವೆ.