alex Certify ಸಮುದ್ರದಾಳದಲ್ಲಿ ಪತ್ತೆಯಾಯ್ತು ಬಲು ಅಪರೂಪದ ಮರಿ ಘೋಸ್ಟ್ ಶಾರ್ಕ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಮುದ್ರದಾಳದಲ್ಲಿ ಪತ್ತೆಯಾಯ್ತು ಬಲು ಅಪರೂಪದ ಮರಿ ಘೋಸ್ಟ್ ಶಾರ್ಕ್..!

ಸಮುದ್ರ ಒಂದು ಅದ್ಭುತ ಮತ್ತು ನಿಗೂಢ ರಹಸ್ಯವಾಗಿದೆ. ಇಲ್ಲಿ ಬಲು ಅಪರೂಪದ, ಹಲವಾರು ವೈಶಿಷ್ಟ್ಯಗಳ ಜೀವಿಗಳಿಂದ ಸಾಗರವು ತುಂಬಿದೆ. ಇದೀಗ ಅಂತಹ ಅಪರೂಪದ ಮರಿ ಘೋಸ್ಟ್ (ಪ್ರೇತ) ಶಾರ್ಕ್ ಪತ್ತೆಯಾಗಿದೆ. ಆಗಷ್ಟೇ ಜನಿಸಿದ ಘೋಸ್ಟ್ (ಪ್ರೇತ) ಶಾರ್ಕ್ ಅನ್ನು ನ್ಯೂಜಿಲ್ಯಾಂಡ್ನ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.

ಹೊಸದಾಗಿ ಮೊಟ್ಟೆಯೊಡೆದ ಘೋಸ್ಟ್(ಪ್ರೇತ) ಶಾರ್ಕ್ ನ್ಯೂಜಿಲೆಂಡ್‌ನ ಸೌತ್ ಐಲ್ಯಾಂಡ್‌ನ ಪೂರ್ವ ಕರಾವಳಿಯಿಂದ 1.2 ಕಿಲೋಮೀಟರ್ ಆಳದಲ್ಲಿ ಕಾಣಿಸಿಕೊಂಡಿದೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವಾಟರ್ ಅಂಡ್ ಅಟ್ಮಾಸ್ಫಿಯರಿಕ್ ರಿಸರ್ಚ್ ನ ಸಂಶೋಧಕರ ತಂಡವು ಚಾಥಮ್ ರೈಸ್‌ನಲ್ಲಿ ಟ್ರಾಲ್ ಸಮೀಕ್ಷೆಯನ್ನು ನಡೆಸಿದೆ.

ಈ ವೇಳೆ ಆಕಸ್ಮಿಕವಾಗಿ ಅಪರೂಪದ ಆವಿಷ್ಕಾರ ಮಾಡಲಾಗಿದೆ. ಅದರ ಹೊಟ್ಟೆಯು ಇನ್ನೂ ಮೊಟ್ಟೆಯ ಹಳದಿ ಲೋಳೆಯಿಂದ ತುಂಬಿರುವುದರಿಂದ ಶಾರ್ಕ್ ಮರಿ ಇತ್ತೀಚೆಗೆ ಹೊರಬಂದಿದೆ ಎಂಬುದಾಗಿ ವಿಜ್ಞಾನಿಗಳು ಹೇಳಿದ್ದಾರೆ.

ಘೋಸ್ಟ್ ಶಾರ್ಕ್ ಅನ್ನು ಚಿಮೇರಾ ಎಂದೂ ಕರೆಯುತ್ತಾರೆ. ಈ ರೀತಿಯಾಗಿ ಕಾಣಿಸಿಕೊಳ್ಳುವುದು ಅತ್ಯಂತ ಅಪರೂಪವಾಗಿದೆ. ನೋಡಲು ವಿಚಿತ್ರವಾಗಿರುವುದರಿಂದ ಇದಕ್ಕೆ ಪ್ರೇತ ಶಾರ್ಕ್ ಎಂದು ಹೆಸರಿಡಲಾಗಿದೆ.

— Brit Finucci (@BritFinucci) February 8, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...