ಬಿಎಂಡಬ್ಲು ಇದೇ ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ ತನ್ನ ಸಂಪೂರ್ಣ ಎಲೆಕ್ಟ್ರಿಕ್ ಮಾಡೆಲ್ ಬಿಎಂಡಬ್ಲು ಐಎಕ್ಸ್1ನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ಈ ಕಾರಿನ ದರ 66,90,000 ರೂಪಾಯಿ ಇರಲಿದೆ ಎಂದು ಕಂಪನಿ ತಿಳಿಸಿದೆ. iX1 ಮಾದರಿಯು 66.4kWh ಬ್ಯಾಟರಿಯೊಂದಿಗೆ ಬರುತ್ತದೆ ಎಂದು ಕಂಪನಿ ಹೇಳಿದೆ.
ಬಿಎಂಡಬ್ಲು ಐಎಕ್ಸ್1 ಕಾಕ್ಪಿಟ್ ಸ್ಪರ್ಶ ಹಾಗೂ ಧ್ವನಿ ನಿಯಂತ್ರಣದ ಬೆಂಬಲದೊಂದಿಗೆ ಕರ್ವ್ ಡಿಸ್ಪ್ಲೇ ಹೊಂದಿದೆ. ಬಿಎಂಡಬ್ಲು ಹೊಸ ಕಾರಿನಲ್ಲಿ ನೀವು ಒಂದು ಬಾರಿ ಚಾರ್ಜ್ ಮಾಡಿದರೆ ಅಂದು 440 ಕಿ. ಮೀ ಚಲಿಸುವ ಸಾಮರ್ಥ್ಯ ಹೊಂದಿದೆ.
ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್ಗಳಲ್ಲಿ ವೇಗವಾಗಿ ಚಾರ್ಜ್ ಮಾಡಬಹುದಾಗಿದೆ.
BMW iX1 Apple CarPlay ಮತ್ತು Android Auto ಸಪೋರ್ಟ್ ಹೊಂದಿದೆ. ಪನೋರಮಿಕ್ ಗ್ಲಾಸ್, ಸನ್ರೂಫ್ ಹಾಗೂ ಪ್ರೀಮಿಯಂ ಒಳಾಂಗಣ ವಿನ್ಯಾಸವನ್ನು ಈ ಕಾರು ಹೊಂದಿದೆ. ಈ ಕಾರು 230 kW (hp) ಪವರ್ ಮತ್ತು 494 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ನೀವು 120 ಕಿ.ಮೀ ದೂರ ಪ್ರಯಾಣಿಸಬೇಕು ಎಂದುಕೊಂಡಿದ್ದಲ್ಲಿ ಚಾರ್ಜಿಂಗ್ ಸ್ಟೇಷನ್ನಲ್ಲಿ ಕೇವಲ 10 ನಿಮಿಷ ಚಾರ್ಜ್ ಮಾಡಿದರೂ ಸಾಕು. ಈ ಕಾರಿಗೆ ಬುಕ್ಕಿಂಗ್ ಈಗಾಗಲೇ ಆರಂಭಗೊಂಡಿದೆ. ಭಾರತದಲ್ಲಿ ಎಕ್ಸ್ ಶೋ ರೂಂ ಬೆಲೆ 66.90 ಲಕ್ಷ ರೂಪಾಯಿ ಎನ್ನಲಾಗಿದೆ.