ಇಂಜಿನ್‌ನ ವಿಭಾಗವೊಂದರಲ್ಲಿ ಪದೇ ಪದೇ ಬೆಂಕಿ ಹೊತ್ತಿಕೊಳ್ಳುವ ಘಟನೆಗಳು ಜರುಗಿದ ಬಳಿಕ ಆಟೋಮೊಬೈಲ್ ದಿಗ್ಗಜ ಬಿಎಂಡಬ್ಲ್ಯೂ ಅಮೆರಿಕದ ಮಾರುಕಟ್ಟೆಯಿಂದ ತನ್ನ ಕಂಪನಿಯ 9,17,000 ದಷ್ಟು ಹಳೆಯ ಕಾರುಗಳು ಹಾಗು ಎಸ್‌ಯುವಿಗಳನ್ನು ಮರಳಿ ಪಡೆಯುತ್ತಿದೆ.
2006-2013ರ ಅವಧಿಯ ಬಿಎಂಡಬ್ಲ್ಯೂನ 3 ಸೀರೀಸ್, 5 ಸೀರೀಸ್, 1 ಸೀರೀಸ್, ಎಕ್ಸ್5, ಎಕ್ಸ್3 ಹಾಗೂ ಜ಼ಡ್4 ವಾಹನಗಳನ್ನು ಮರಳಿ ಕರೆಯಿಸಿಕೊಳ್ಳಲಾಗಿದೆ.
SBI Kisan Credit Card: ಕಡಿಮೆ ಬಡ್ಡಿದರದಲ್ಲಿ ಕೃಷಿ ಸಾಲ ಪಡೆಯಲು ಇಲ್ಲಿದೆ ಡಿಟೇಲ್ಸ್
ಈ ವಾಹನಗಳ ಪಾಸಿಟಿವ್ ಕ್ರಾಂಕ್‌ಕೇಸ್ ವೆಂಟಿಲೇಷನ್ ವಾಲ್ವ್ ಹೀಟರ್‌ಗಳಲ್ಲಿ ಎಲೆಕ್ಟ್ರಿಕ್ ಶಾರ್ಟ್ ಸರ್ಕ್ಯೂಟ್ ಆಗಿರುವ ಸಾಧ್ಯತೆ ಇದೆ ಎಂದು ಅಮೆರಿಕದ ರಾಷ್ಟ್ರೀಯ ಹೆದ್ದಾರಿ ಮತ್ತು ಸಂಚಾರ ಸುರಕ್ಷತಾ ಆಡಳಿತ ತಿಳಿಸಿದೆ. ವಾಹನಗಳನ್ನು ಚಾಲನೆ ಮಾಡುವಾಗ ಅಥವಾ ಪಾರ್ಕ್ ಮಾಡಿದಾಗ ಹೀಗೆ ಬೆಂಕಿ ಕಾಣಿಸಿಕೊಳ್ಳುತ್ತಿದೆ.