ಭಾರತಕ್ಕೆ ಒಮಿಕ್ರಾನ್ ಕಾಲಿಟ್ಟಾಗಿದೆ. ಒಮಿಕ್ರಾನ್ ಹರಡದಂತೆ ಎಲ್ಲೆಡೆ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗ್ತಿದೆ. ವಿಮಾನ ನಿಲ್ದಾಣಗಳಲ್ಲಿ ಕೊರೊನಾ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ.
ಮುಂಬೈ ಆಡಳಿತ, ಒಮಿಕ್ರಾನ್ ನಿಯಂತ್ರಣಕ್ಕೆ ಮಾಸ್ಟರ್ ಪ್ಲಾನ್ ಮಾಡಿದೆ. ಒಮಿಕ್ರಾನ್ ಹರಡದಂತೆ ನೋಡಿಕೊಳ್ಳಲು ನಾಲ್ಕು ಅಂಶಗಳನ್ನು ಜಾರಿಗೆ ತಂದಿದೆ.
ಮುಂಬೈ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ ಸಿಇಒ ಈ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಅವರು ಪ್ರತಿದಿನ ಬೆಳಗ್ಗೆ ಹೈ ರಿಸ್ಕ್ ದೇಶಗಳಿಂದ 24 ಗಂಟೆಯ ಹಿಂದೆ ಮುಂಬೈಗೆ ಬಂದ ಪ್ರಯಾಣಿಕರ ಪಟ್ಟಿ ಸಿದ್ಧಪಡಿಸಲಿದ್ದಾರೆ. ಕಳೆದ 15 ದಿನಗಳಲ್ಲಿ ಅಂತಹ ದೇಶಗಳಿಗೆ ಪ್ರಯಾಣಿಸಿದ ನಾಯಕರು, ಪ್ರಯಾಣಿಕರ ಪಟ್ಟಿಯನ್ನು ಆನ್‌ಲೈನ್ ಸಾಫ್ಟ್ ವೇರ್ ಮೂಲಕ ವಿಪತ್ತು ನಿರ್ವಹಣಾ ಇಲಾಖೆಯ ನಿರ್ದೇಶಕ ಮಹೇಶ್ ನಾರ್ವೇಕರ್ ಅವರಿಗೆ ಕಳುಹಿಸಬೇಕಾಗುತ್ತದೆ.
ಮೊದಲ ದಿನದ ಗಳಿಕೆಯಲ್ಲೇ ಶ್ರೀಮುರಳಿ ‘ಮದಗಜ’ ದಾಖಲೆ
ವಿಪತ್ತು ನಿರ್ವಹಣಾ ಘಟಕದ ನಿರ್ದೇಶಕ ಮಹೇಶ್ ನಾರ್ವೇಕರ್, ಸಾಫ್ಟ್ ವೇರ್ ವಿನ್ಯಾಸಗೊಳಿಸಲಿದ್ದಾರೆ. ಪ್ರಯಾಣಿಕರನ್ನು ಅವರ ವಿಳಾಸದ ಆಧಾರದ ಮೇಲೆ ಮುಂಬೈನ 24 ವಾರ್ಡ್‌ಗಳಲ್ಲಿ ಸಾಫ್ಟವೇರ್ ಮೂಲಕ ವಿಂಗಡಿಸಲಾಗುತ್ತದೆ. ಇದರ ನಂತರ, 10 ಗಂಟೆಗೆ, ಎಲ್ಲಾ 24 ವಾರ್ಡ್‌ಗಳ ವಾರ್ ರೂಮ್‌ಗಳು ಮತ್ತು ವಾರ್ಡ್‌ನ ವೈದ್ಯಕೀಯ ಅಧಿಕಾರಿ ತಮ್ಮ ಪ್ರದೇಶದ ಪ್ರಯಾಣಿಕರ ಸಂಪೂರ್ಣ ಪಟ್ಟಿಯನ್ನು ಪಡೆಯುತ್ತಾರೆ.
ಪ್ರತಿದಿನ ಬೆಳಿಗ್ಗೆ 10 ಗಂಟೆಗೆ ವಿಪತ್ತು ನಿರ್ವಹಣಾ ಘಟಕದಿಂದ ಅಂತಹ ಪ್ರಯಾಣಿಕರ ಪಟ್ಟಿಯನ್ನು ಸ್ವೀಕರಿಸಿದ ನಂತರ, ವಾರ್ ರೂಮ್, ಎಲ್ಲಾ ಪ್ರಯಾಣಿಕರಿಗೆ ದೂರವಾಣಿ ಕರೆ ಮಾಡಲಿದೆ. 7 ದಿನಗಳವರೆಗೆ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆಯೇ ಎಂಬುದನ್ನು ತಿಳಿಯಲಿದೆ. ಪ್ರಯಾಣಿಕರಿಗೆ ಕೋವಿಡ್ ಪ್ರೋಟೋಕಾಲ್ ಬಗ್ಗೆ ಸರಿಯಾದ ಮಾಹಿತಿ ನೀಡಲಿದೆ. ಆರೋಗ್ಯದ ಬಗ್ಗೆ ಸಲಹೆ ನೀಡಲಿದೆ. ದಿನಕ್ಕೆ ಐದು ಬಾರಿ ಸಂವಹನ ನಡೆಸಲಿದೆ.
ಆಂಬ್ಯುಲೆನ್ಸ್ ಮೂಲಕ ಪ್ರಯಾಣಿಕರ ಕ್ವಾರಂಟೈನ್ ಬಗ್ಗೆ ಪರಿಶೀಲನೆ ನಡೆಯಲಿದೆ. 7ನೇ ದಿನ ಹೋಮ್ ಕ್ವಾರಂಟೈನ್ ನಲ್ಲಿರುವವರಿಗೆ ಆರ್‌ಟಿ-ಪಿಸಿಆರ್ ನಡೆಯಲಿದೆ. ಯಾವುದೇ ರೋಗ ಲಕ್ಷಣಗಳು ಕಂಡು ಬಂದರೆ, ಅಗತ್ಯ ಚಿಕಿತ್ಸೆ ಮತ್ತು ಆಸ್ಪತ್ರೆಗೆ ದಾಖಲಿಸಲು ವಾರ್ ರೂಮ್ ಅವರಿಗೆ ಸಹಾಯ ಮಾಡಲಿದೆ.
ಸ್ವಂತ ಸೂರು ಹೊಂದುವ ಕನಸು ಕಂಡವರಿಗೆ ಕೆನರಾ ಬ್ಯಾಂಕಿನಿಂದ ‘ಬಂಪರ್’ ಆಫರ್
ಹೋಮ್ ಕ್ವಾರಂಟೈನ್ ಪ್ರೋಟೋಕಾಲ್ ಉಲ್ಲಂಘಿಸುವ ಪ್ರಯಾಣಿಕರ ವಿರುದ್ಧ ಸಾಂಕ್ರಾಮಿಕ ಕಾಯ್ದೆ, 1897 ಮತ್ತು ವಿಪತ್ತು ನಿರ್ವಹಣಾ ಕಾಯ್ದೆ, 2005 ರ ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ಪ್ರತಿ ವಾರ್ ರೂಮ್ ಗೆ 10 ಆಂಬ್ಯುಲೆನ್ಸ್ ನೀಡಲಾಗಿದ್ದು, ಎಲ್ಲ ವ್ಯವಸ್ಥೆಯನ್ನು ಪ್ರತಿ ದಿನ ಪರಿಶೀಲಿಸಲಾಗುವುದು.