alex Certify ವೈರಲ್ ಆಯ್ತು ಬೆಂಗಳೂರು ಏರ್ಪೋರ್ಟ್ ಬಳಿ ನಡೆದ ಹೆಮ್ಮೆಯ ಕ್ಷಣ – ಯೋಧರಿಗೆ ಬಾಲಕ ಸೆಲ್ಯೂಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈರಲ್ ಆಯ್ತು ಬೆಂಗಳೂರು ಏರ್ಪೋರ್ಟ್ ಬಳಿ ನಡೆದ ಹೆಮ್ಮೆಯ ಕ್ಷಣ – ಯೋಧರಿಗೆ ಬಾಲಕ ಸೆಲ್ಯೂಟ್

ಬೆಂಗಳೂರು ವಿಮಾನ ನಿಲ್ದಾಣದ ಬಳಿ ನಡೆದ ಘಟನೆಯ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪೋಷಕರೊಂದಿಗೆ ಹೆಜ್ಜೆ ಹಾಕುತ್ತಿದ್ದ ಬಾಲಕ ಅಲ್ಲಿ ಸೇನಾ ವಾಹನದಲ್ಲಿದ್ದ ಯೋಧರನ್ನು ಕಂಡು ಸೆಲ್ಯೂಟ್ ಮಾಡಿದ್ದಾನೆ. ಯೋಧರೂ ಪ್ರತಿಯಾಗಿ ಬಾಲಕನಿಗೆ ಸ್ಪಂದಿಸಿದ್ದಾರೆ. ಈ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದ್ದು, ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅಭಿಷೇಕ್ ಕುಮಾರ್ ಝಾ ಅವರು ತಮ್ಮ ಸ್ನೇಹಿತನ ಈ ವಿಡಿಯೋವನ್ನು ಹೆಮ್ಮೆಯ ಕ್ಷಣ ಎಂದು ಪೋಸ್ಟ್ ಮಾಡಿದ್ದಾರೆ.

ಅನೇಕರು ಇದರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದೊಂದು ಹೆಮ್ಮೆಯ ಕ್ಷಣ ಎಂದು ಕೊಂಡಾಡಿದ್ದಾರೆ. ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಮತ್ತು ಯುವಕರಿಗೆ ದೇಶದ ಬಗ್ಗೆ, ಯೋಧರ ಬಗ್ಗೆ ಗೌರವ ನೀಡುವ ಸಂಸ್ಕೃತಿ ಹೇಳಿಕೊಡಬೇಕು. ನಮ್ಮ ದೇಶ ದೇಶಕ್ಕೆ, ಯೋಧರಿಗೆ ಗೌರವ ನೀಡಬೇಕು. ಈ ವಿಷಯದಲ್ಲಿ ಭಾರತ ಎಂದಿಗೂ ಮುಂದಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...