alex Certify ‘ಶಂಖ’ ಊದುವುದರಿಂದ ಕಾಡಲ್ಲ ಒತ್ತಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಶಂಖ’ ಊದುವುದರಿಂದ ಕಾಡಲ್ಲ ಒತ್ತಡ

ಮಂದಿರಗಳಲ್ಲಿ, ಪೂಜಾ ಸ್ಥಳಗಳಲ್ಲಿ, ಮನೆಗಳಲ್ಲಿ ಶಂಖವನ್ನು ಬಳಸ್ತಾರೆ. ಅನೇಕ ಮನೆಗಳಲ್ಲಿ ಪೂಜೆ ವೇಳೆ ಶಂಖವನ್ನು ಊದುವ ಪದ್ಧತಿ ಈಗಲೂ ಇದೆ. ಕೆಲ ಮನೆಗಳಲ್ಲಿ ಶಂಖವನ್ನು ದೇವರ ಮನೆಯಲ್ಲಿಟ್ಟು ಪೂಜೆ ಮಾಡ್ತಾರೆ. ಧಾರ್ಮಿಕ ಪ್ರಾಮುಖ್ಯತೆಯ ಜೊತೆಗೆ ವೈಜ್ಞಾನಿಕವಾಗಿಯೂ ಶಂಖಕ್ಕೆ ಮಹತ್ವವಿದೆ.

ಶಂಖದ ಧ್ವನಿಯಿಂದ ಸುತ್ತಮುತ್ತಲಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಸೊಳ್ಳೆ ಕೂಡ ಓಡಿ ಹೋಗುತ್ತದೆ.

ನಿಯಮಿತವಾಗಿ ಶಂಖ ಊದುವವರಿಗೆ ಹೃದಯಾಘಾತವಾಗುವುದಿಲ್ಲವಂತೆ. ಶಂಖ ಊದುವುದರಿಂದ ಶ್ವಾಸಕೋಶ ಆರೋಗ್ಯವಾಗಿರುತ್ತದೆ. ಉಸಿರಾಟದ ಸಮಸ್ಯೆ ಕಾಡುವುದಿಲ್ಲ.

ರಾತ್ರಿ ಶಂಖಕ್ಕೆ ನೀರು ಹಾಕಿಟ್ಟು ಬೆಳಿಗ್ಗೆ ಅದನ್ನು ಚರ್ಮಕ್ಕೆ ಹಾಕಿ ಮಸಾಜ್ ಮಾಡಿಕೊಳ್ಳಿ. ಇದ್ರಿಂದ ಚರ್ಮ ಸಂಬಂಧಿ ಖಾಯಿಲೆಗಳು ದೂರವಾಗುತ್ತವೆ. ರಾತ್ರಿ ಹಾಕಿಟ್ಟ ನೀರಿಗೆ ರೋಸ್ ವಾಟರ್ ಸೇರಿಸಿ ತಲೆ ತೊಳೆದುಕೊಳ್ಳುವುದರಿಂದ ಕೂದಲು ಬೆಳ್ಳಗಾಗುವುದಿಲ್ಲ. ಹೊಟ್ಟೆ ನೋವು, ಜೀರ್ಣಕ್ರಿಯೆ ಸಮಸ್ಯೆ ಕಾಡುವವರು ಈ ನೀರನ್ನು ನಿಯಮಿತವಾಗಿ ಕುಡಿಯುತ್ತ ಬಂದರೆ ಸಮಸ್ಯೆ ಕಡಿಮೆಯಾಗುತ್ತದೆ.

ಕೆಲಸದ ಒತ್ತಡದಿಂದ ಬಳಲುವವರು ಕೂಡ ಶಂಖವನ್ನು ಊದಬೇಕು. ಇದ್ರಿಂದ ಒತ್ತಡ ಕಡಿಮೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...