alex Certify ವಿಮಾನದಲ್ಲಿ ಧೂಮಪಾನ ಮಾಡಿದ ಬ್ಲಾಗರ್‌ ಐಶ್ವರ್ಯಾ ರೈ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನದಲ್ಲಿ ಧೂಮಪಾನ ಮಾಡಿದ ಬ್ಲಾಗರ್‌ ಐಶ್ವರ್ಯಾ ರೈ ಅರೆಸ್ಟ್

ವಿಮಾನದಲ್ಲಿ ಧೂಮಪಾನ ಮಾಡಲು ಪ್ರಯತ್ನಿಸಿದ ಬ್ಲಾಗರ್​ ಐಶ್ವರ್ಯಾ ರೈ ಅವರನ್ನು ಬಂಧಿಸಲಾಗಿದೆ. ಮುಂಬೈನಲ್ಲಿ ಈ ಘಟನೆ ನಡೆದಿದೆ. ವಿಮಾನದಲ್ಲಿ ಧೂಮಪಾನ ಮಾಡಿ ಸಹ ಪ್ರಯಾಣಿಕರ ಜೀವಕ್ಕೆ ಅಪಾಯವನ್ನುಂಟು‌ ಮಾಡಿದ್ದಕ್ಕಾಗಿ ಈಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೆಬ್ರವರಿ 18 ರಂದು ಮುಂಬೈನಿಂದ ರಾಂಚಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಜೆಟ್ ಅರೆನಾ ಪ್ರಕಾರ, ಐಶ್ವರ್ಯಾ ರೈ ವಿಮಾನದಲ್ಲಿ ಧೂಮಪಾನ ಮಾಡಿದ್ದಾರೆ. ಮಹಿಳೆ ಶೌಚಾಲಯದೊಳಗೆ ಹೋದಾಗ ಧೂಮಪಾನ ಮಾಡಿದ್ದಾಳೆ.

ವಿಮಾನದಲ್ಲಿ ಹೊಗೆ ಅಲಾರಾಂ ಹೊಡೆದಾಗ ವಿಷಯ ಬೆಳಕಿಗೆ ಬಂದಿದೆ. ನಂತರ ವಿಮಾನ ಸಿಬ್ಬಂದಿಗೆ ಆಕೆ ಸಿಕ್ಕಿಬಿದ್ದಿದ್ದಾಳೆ. ವಿಮಾನದ ಒಳಗೆ ಹೋಗುವಾಗ ಎಷ್ಟೆಲ್ಲಾ ಸೆಕ್ಯುರಿಟಿ ಚೆಕ್​ ಇದ್ದರೂ ಈಕೆ ಸಿಗರೇಟ್​ ಹಾಗೂ ಲೈಟರ್​ ಅನ್ನು ಹೇಗೆ ಸಾಗಿಸಿದ್ದಳು ಎಂಬ ಬಗ್ಗೆ ಪ್ರಯಾಣಿಕರು ಸುರಕ್ಷತೆಯ ಬಗ್ಗೆ ಆತಂಕ ಹೊರಹಾಕುತ್ತಿದ್ದಾರೆ. ಈ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಹಿಂದೆ ಕೂಡ ಇಂಥ ಘಟನೆಗಳು ನಡೆದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...