ನವದೆಹಲಿ : ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಡಿಸೆಂಬರ್ 2021 ರಿಂದ 10 ವೆಬ್ ಸೈಟ್ ಗಳು ಮತ್ತು 5 ಅಪ್ಲಿಕೇಶನ್ ಗಳು ಸೇರಿದಂತೆ 635 ಯುಆರ್ ಎಲ್ ಗಳನ್ನು ನಿರ್ಬಂಧಿಸಲು ನಿರ್ದೇಶನಗಳನ್ನು ನೀಡಿದೆ ಎಂದು ಕೇಂದ್ರ ಮಾಹಿತಿ ಸಚಿವ ಅನುರಾಗ್ ಠಾಕೂರ್ ಗುರುವಾರ ರಾಜ್ಯಸಭೆಗೆ ಮಾಹಿತಿ ನೀಡಿದರು.
ಮಾಹಿತಿ ತಂತ್ರಜ್ಞಾನ ನಿಯಮಗಳು, 2021 ರ ಸಂಬಂಧಿತ ವಿಭಾಗದ ಅಡಿಯಲ್ಲಿ ಸಚಿವಾಲಯವು ಎಷ್ಟು ವೆಬ್ಸೈಟ್ ಗಳು, ಯುಆರ್ ಎಲ್ ಗಳು, ಮತ್ತು ಅಪ್ಲಿಕೇಶನ್ ಗಳನ್ನು ನಿರ್ಬಂಧಿಸಿದೆ ಎಂದು ಅವರನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು ಡಿಸೆಂಬರ್ 2021 ರಿಂದ 10 ವೆಬ್ ಸೈಟ್ ಗಳು ಮತ್ತು 5 ಅಪ್ಲಿಕೇಶನ್ ಗಳು ಸೇರಿದಂತೆ 635 ಯುಆರ್ ಎಲ್ ಗಳನ್ನು ನಿರ್ಬಂಧಿಸಲು ನಿರ್ದೇಶನಗಳನ್ನು ನೀಡಿದೆ ಎಂದು ಹೇಳಿದರು.
ಮಾಹಿತಿ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗೆ ಸಂಬಂಧಿಸಿದ ಪ್ರತ್ಯೇಕ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ವರ್ಷದ ಜೂನ್ ವೇಳೆಗೆ ಸಚಿವಾಲಯ ಮತ್ತು ಅದರ ವಿವಿಧ ಮಾಧ್ಯಮ ಘಟಕಗಳು / ಸಂಸ್ಥೆಗಳಲ್ಲಿ 1,841 ಹುದ್ದೆಗಳು ಖಾಲಿ ಇವೆ ಎಂದು ಹೇಳಿದರು. ಸಚಿವಾಲಯವು ಕಳೆದ ಐದು ವರ್ಷಗಳಲ್ಲಿ 94 ಹುದ್ದೆಗಳನ್ನು ಸೃಷ್ಟಿಸಿದೆ ಎಂದು ಅವರು ಹೇಳಿದರು. ಬ್ಯಾಕ್ಲಾಗ್ ಹುದ್ದೆಗಳು ಸೇರಿದಂತೆ ಕಳೆದ ಐದು ವರ್ಷಗಳಲ್ಲಿ 446 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.