ಕೋಲ್ಕತ್ತಾ: ಸಿಎಂ ಮಮತಾ ಬ್ಯಾನರ್ಜಿ ನಿವಾಸದ ಬಳಿ ಮೃತದೇಹದೊಂದಿಗೆ ಪ್ರತಿಭಟನೆ ನಡೆಸಿದ ಬಿಜೆಪಿಯ ಭವಾನಿಪುರ ಉಪಚುನಾವಣೆ ಅಭ್ಯರ್ಥಿ ಪ್ರಿಯಾಂಕಾ ಟಿಬ್ರೆವಾಲ್ ವಿರುದ್ಧ ಪ್ರಕರಣ ದಾಖಲಾಗಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿವಾಸದ ಬಳಿ, ಕಲಿಘಾಟ್ ನಲ್ಲಿ ಮೊಗ್ರಾಟ್ ಪಶ್ಚಿಮ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಧುರ್ಜತಿ ಸಹಾ ಅವರ ಮೃತದೇಹದೊಂದಿಗೆ ಬಿಜೆಪಿಯ ಭವಾನಿಪುರ ಅಭ್ಯರ್ಥಿ ಪ್ರಿಯಾಂಕಾ ಟಿಬ್ರೆವಾಲ್ ಪ್ರತಿಭಟನೆ ನಡೆಸಿದ್ದರು.
ಈ ಸಂಬಂಧ ಬಂಗಾಳ ಬಿಜೆಪಿ ಅಧ್ಯಕ್ಷರು ಮತ್ತು ಇತರ ಹಲವು ಸಂಸದರ ವಿರುದ್ಧ ಕೋಲ್ಕತ್ತಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸುಕಾಂತ ಮಜುಂದರ್, ಸಂಸದ ಜ್ಯೋತಿರ್ಮೋಯ್ ಸಿಂಗ್ ಮಹತೋ, ಸಂಸದ ಅರ್ಜುನ್ ಸಿಂಗ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಖಾತೆ ತೆರೆಯಲು ಬ್ಯಾಂಕಿಗೆ ಹೋದ ದಿನಗೂಲಿ ಕಾರ್ಮಿಕನಿಗೆ ಕಾದಿತ್ತು ಅಚ್ಚರಿ…!
ದಕ್ಷಿಣ 24 ಪರಗಣ ಜಿಲ್ಲೆಯ ಮಾಗ್ರಹಾತ್ ಪಶ್ಚಿಮದಿಂದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಿಂತಿದ್ದ ಧುರ್ಜಾತಿ ಸಹಾ ಅವರನ್ನು ಮೇ 2 ರಂದು ಮತ ಎಣಿಕೆ ದಿನ ತೃಣಮೂಲ ಕಾರ್ಯಕರ್ತರು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ದಾಳಿಯಲ್ಲಿ ಸಹಾ ತಲೆಗೆ ಗಂಭೀರ ಗಾಯವಾಗಿದ್ದು, ಸುದೀರ್ಘ ಚಿಕಿತ್ಸೆಯ ನಂತರ ಬುಧವಾರ ಅವರು ಮೃತಪಟ್ಟಿದ್ದಾರೆ. ಸಹಾ ಸಾವಿನ ಕುರಿತು ಸಿಬಿಐ ತನಿಖೆಗೆ ಕುಟುಂಬವು ಒತ್ತಾಯಿಸಿದೆ.
ಹೊಸದಾಗಿ ನೇಮಕಗೊಂಡ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸುಕಾಂತ ಮಜುಂದಾರ್, ಸಂಸದ ಅರ್ಜುನ್ ಸಿಂಗ್ ಮತ್ತು ಪಕ್ಷದ ಭವಾನಿಪುರ ಉಪಚುನಾವಣೆ ಅಭ್ಯರ್ಥಿ ಪ್ರಿಯಾಂಕಾ ಟಿಬ್ರೆವಾಲ್ ಸೇರಿದಂತೆ, ಬಿಜೆಪಿ ನಾಯಕರು ಸಹಾ ಮೃತದೇಹದೊಂದಿಗೆ ಬೃಹತ್ ರ್ಯಾಲಿಯನ್ನು ಕೈಗೊಂಡಿದ್ದರು. ಸಿಎಂ ಮಮತಾ ಬ್ಯಾನರ್ಜಿ ಅವರ ನಿವಾಸದ ಮುಂಭಾಗದಲ್ಲಿ ಮೃತದೇಹವನ್ನಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಪೊಲೀಸರು ಮಧ್ಯಪ್ರವೇಶಿಸಿದಾಗ ಘರ್ಷಣೆ ಉಂಟಾಯಿತು. ಹೀಗಾಗಿ ಪ್ರತಿಭಟನಾನಿರತ ಬಿಜೆಪಿ ನಾಯಕರ ವಿರುದ್ಧ ಕೇಸ್ ದಾಖಲಾಗಿದೆ.