alex Certify ಬರಗಾಲದಲ್ಲಿ ಮಜವಾದಿ ಸಿದ್ಧರಾಮಯ್ಯ, ಜಮೀರ್ ಆಡಂಬರಕ್ಕೇನೂ ಕಡಿಮೆ ಇಲ್ಲ: ಐಷಾರಾಮಿ ವಿಮಾನ ಪ್ರಯಾಣಕ್ಕೆ ಬಿಜೆಪಿ ಟೀಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರಗಾಲದಲ್ಲಿ ಮಜವಾದಿ ಸಿದ್ಧರಾಮಯ್ಯ, ಜಮೀರ್ ಆಡಂಬರಕ್ಕೇನೂ ಕಡಿಮೆ ಇಲ್ಲ: ಐಷಾರಾಮಿ ವಿಮಾನ ಪ್ರಯಾಣಕ್ಕೆ ಬಿಜೆಪಿ ಟೀಕೆ

ಬೆಂಗಳೂರು: ಜನರ ತೆರಿಗೆ ದುಡ್ಡಿನಲ್ಲಿ ಪ್ರೈವೇಟ್ ಜೆಟ್ ಒಳಗೆ ಮೋಜು ಮಸ್ತಿ ಮಾಡುತ್ತಾ ಮಜವಾದಿ ಮುಖ್ಯಮಂತ್ರಿ ನಾಡಿನ ಬಡವರನ್ನು ಅಣುಕಿಸುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

ದೆಹಲಿಯಿಂದ ಬೆಂಗಳೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್ ಐಷಾರಾಮಿ ವಿಮಾನದಲ್ಲಿ ಆಗಮಿಸಿದ ಬಗ್ಗೆ ರಾಜ್ಯ ಬಿಜೆಪಿ ಘಟಕದಿಂದ ಟ್ವೀಟ್ ಮಾಡಲಾಗಿದೆ.

ರಾಜ್ಯದಲ್ಲಿ ತೀವ್ರ ಬರ ಬಂದು ಜನತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನರಳುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಆರು ತಿಂಗಳು ಮುಗಿದರೂ ಒಂದೇ ಒಂದು ಗುಂಡಿ ಮುಚ್ಚುವ ಕಾಮಗಾರಿ ಕೂಡ ನಡೆದಿಲ್ಲ. ಆದರೆ, ಮಜವಾದಿ ಸಿದ್ಧರಾಮಯ್ಯ ಮತ್ತು ಅವರ ಅತ್ಯಾಪ್ತ ಜಮೀರ್ ಅಹ್ಮದ್ ಅವರ ಆಡಂಬರಕ್ಕೇನು ಕಡಿಮೆ ಇಲ್ಲ. ಜನರ ತೆರಿಗೆ ದುಡ್ಡಿನಲ್ಲಿ ಪ್ರೈವೇಟ್ ಜೆಟ್ ಒಳಗೆ ಮೋಜು ಮಸ್ತಿ ಮಾಡುತ್ತಾ ಮಜವಾದಿ ಮುಖ್ಯಮಂತ್ರಿ ನಾಡಿನ ಬಡವರನ್ನು ಅಣುಕಿಸುತ್ತಿರುವುದಕ್ಕೆ ಈ ಅವತಾರವೇ ಸಾಕ್ಷಿ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...