ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವಿಚಾರಕ್ಕೆ ಸಂಬಂಧಿಸಿದಂತೆ ವಿಸ್ತರಣೆಯೋ? ಪುನಾರಚನೆಯೋ? ಸಿಎಂ ಬದಲಾವಣೆಯೋ? ಇವೆಲ್ಲಾ ನಿಮ್ಮ ಪಕ್ಷದ ಹಣೆಬರಹ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಸಂಪುಟ ಸರ್ಕಸ್ ನಲ್ಲಿ ರಾಜ್ಯದ ಆಡಳಿತ ದಿಕ್ಕೆಟ್ಟು ಹೋಗಿದೆ. ಶೀಘ್ರವಾಗಿ ಏನಾದರೂ ನಿರ್ಧಾರ ಕೈಗೊಂಡು ಬಿಕ್ಕಟ್ಟನ್ನು ಶಮನಗೊಳಿಸಿ. ಆಡಳಿತದ ಕಡೆ ಗಮನಕೊಟ್ಟು ರಾಜ್ಯವನ್ನು ಉಳಿಸಿ ಎಂದು ಒತ್ತಾಯಿಸಿದ್ದಾರೆ.
ಹಿಂದೆ ಬಿಜೆಪಿ ನಾಯಕರು ಕಾಂಗ್ರೆಸ್ ಬಗ್ಗೆ ಟೀಕಾ ಪ್ರಹಾರ ನಡೆಸುತ್ತಿದ್ದರು. ಹೈಕಮಾಂಡ್ ಸಂಸ್ಕೃತಿ, ಮೂಲನಿವಾಸಿಗಳು-ವಲಸಿಗರು, ಕುಟುಂಬ ರಾಜಕಾರಣ ಪದ ಬಳಸಿ ಟೀಕೆ ಮಾಡುತ್ತಿದ್ದರು. ಕಾಂಗ್ರೆಸ್ ಪಕ್ಷ ಮತ್ತು ಹೈಕಮಾಂಡ್ ವಿರುದ್ಧ ಟೀಕಿಸುತ್ತಿದ್ದವರು ಈಗ ಅದೇ ಆರೋಪ ಮಾಡಿಕೊಂಡು ಬೆತ್ತಲಾಗುತ್ತಿದ್ದಾರೆ ಎಂದು ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.