alex Certify ನಿಮ್ಮನ್ನು ಸಿಎಂ ಮಾಡ್ತೇವೆ 2500 ಕೋಟಿ ಕೊಡಿ ಎಂದಿದ್ರು: ಸ್ಪೋಟಕ ಹೇಳಿಕೆ ನೀಡಿದ ಯತ್ನಾಳ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮನ್ನು ಸಿಎಂ ಮಾಡ್ತೇವೆ 2500 ಕೋಟಿ ಕೊಡಿ ಎಂದಿದ್ರು: ಸ್ಪೋಟಕ ಹೇಳಿಕೆ ನೀಡಿದ ಯತ್ನಾಳ್

ಬೆಳಗಾವಿ: ನಿಮ್ಮನ್ನು ಸಿಎಂ ಮಾಡುತ್ತೇವೆ 2500 ಕೋಟಿ ರೂ. ಕೊಡಿ ಎಂದು ದೆಹಲಿಯಿಂದ ಬಂದ ಕೆಲವರು ಕೇಳಿದ್ದರು ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಮಾತನಾಡಿದ ಅವರು, 2500 ಕೋಟಿ ರೂ. ಕೇಳಿದಾಗ ನಾನು 2500 ಕೋಟಿ ಅಂದರೆ ಏನು ಅಂತ ತಿಳಿದಿದ್ದೀರಿ ಎಂದು ಕೇಳಿದೆ. ಆ ಎರಡೂವರೆ ಸಾವಿರ ಕೋಟಿ ಹೇಗೆ ಇಡುವುದು? ಕೋಣೆಯಲ್ಲಿ ಇಡುವುದಾ? ಗೋದಾಮಿನಲ್ಲಿ ಇಡುವುದಾ? ಎಂದಿದ್ದೆ. ಟಿಕೆಟ್ ಕೊಡಿಸುತ್ತೇವೆ ಎಂದು ಎಲ್ಲಾ ಕಡೆ ಮೋಸ ಮಾಡುತ್ತಾರೆ. ರಾಜಕಾರಣದಲ್ಲಿ ಯಾರೂ ಅಲ್ಲಿ ಇಲ್ಲಿ ಹೋಗಿ ಹಾಳಾಗಬೇಡಿ ಎಂದು ತಿಳಿಸಿದ್ದಾರೆ.

ದೆಹಲಿಗೆ ಕರೆದುಕೊಂಡು ಹೋಗಿ ಟಿಕೆಟ್ ಕೊಡಿಸುತ್ತೇವೆ ಎಂದು ಹೇಳುತ್ತಾರೆ. ಸೋನಿಯಾ ಗಾಂಧಿ, ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿಸುತ್ತೇವೆ ಎನ್ನುತ್ತಾರೆ. ನಾನು ವಾಜಪೇಯಿಯವರ ಅವಧಿಯಲ್ಲಿ ಕೆಲಸ ಮಾಡಿದವನು. ನನ್ನನ್ನು ಅಡ್ವಾಣಿ, ರಾಜನಾಥ್, ಜೇಟ್ಲಿ ಅವರು ಹೆಸರಿಡಿದು ಕರೆಯುತ್ತಿದ್ದರು. ನನಗೇ 2500 ಕೋಟಿ ಕೊಡಿ ಸಿಎಂ ಮಾಡುತ್ತೇವೆ ಎಂದಿದ್ದರು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...