ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಮಂಗಗಳ ದಾಳಿಯಿಂದ ಮಹಿಳೆ ಸಾವನಪ್ಪಿರುವ ಘಟನೆ ನಡೆದಿದೆ. ಅಲ್ಲಿ ಮಂಗಗಳ ಕಾಟ ವಿಪರೀತವಾಗಿದ್ದು , ಸ್ಥಳೀಯರಿಗೆ ಪರದಾಟ ಹೇಳತೀರದಾಗಿದೆ.
ಮೃತರನ್ನು 54 ವರ್ಷದ ಸುಷ್ಮಾ ದೇವಿ ಎಂದು ಗುರುತಿಸಲಾಗಿದ್ದು, ಸ್ಥಳೀಯ ಬಿಜೆಪಿ ಮುಖಂಡನ ಹೆಂಡತಿ. ತನ್ನ ಮನೆಯ ಮಹಡಿಯ ಮೇಲೆ ಮಂಗಗಳಿಂದ ಆಕೆ ದಾಳಿಗೊಳಗಾಗಿದ್ದರು. ಗಾಯಗೊಂಡ ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾರೆ.
ದಾಳಿ ಮಾಡುವ ವೇಳೆ ಆಕೆ, ತನ್ನನ್ನು ರಕ್ಷಿಸಿಕೊಳ್ಳುವಾಗ ಮಹಡಿಯಿಂದ ಬಿದ್ದಿದ್ದಾರೆ. ಇದರಿಂದ ಹೆಚ್ಚಿನ ಪೆಟ್ಟಾಗಿತ್ತು.
ದಹಿಸುತ್ತಿದ್ದ ಕಾರಿನೊಳಗಿದ್ದ ವೃದ್ಧ ದಂಪತಿಯನ್ನು ರಕ್ಷಿಸಿದ ಜನತೆ
ಸುಷ್ಮಾ ಸ್ಥಳೀಯ ಪಂಚಾಯತ್ ವಾರ್ಡ್ 13 ರ ಸದಸ್ಯೆಯಾಗಿದ್ದರು. ಮಾಯಾ ಫಾರ್ಮ್ ನಲ್ಲಿ ಈಕೆಯ ಅಂತ್ಯ ಸಂಸ್ಕಾರ ಮಾಡಲಾಯಿತು. ಘಟನೆ ನಡೆದ ನಂತರ ಸ್ಥಳೀಯರು ಮಂಗ ಕಚ್ಚುವ ಭೀತಿಯಲ್ಲಿ ಅಂಟಿ ರೇಬಿಸ್ ಲಸಿಕೆಯನ್ನು ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಮಥುರಾದಿಂದ ಮಂಗಗಳ ಹಿಡಿಯುವವವರನ್ನು ಒಂದು ವರ್ಷದ ಹಿಂದೆ ಕರೆದುಕೊಂಡು ಬಂದಿದ್ದು, ಸುಮಾರು ಮಂಗಗಳನ್ನು ಹಿಡಿಯಲಾಗಿತ್ತು. ಆ ನಂತರ ಏನನ್ನು ಮಾಡಲಾಗಿಲ್ಲ.