alex Certify ಭರ್ಜರಿ ಪ್ರಚಾರ ನಡೆಸಿದ್ದ ಬಿಜೆಪಿಗೆ ಬಿದ್ದಿದ್ದು ಒಂದೇ ವೋಟ್, 5 ಸದಸ್ಯರ ಕುಟುಂಬದ ಅಭ್ಯರ್ಥಿಗೆ ಬಿಗ್ ಶಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭರ್ಜರಿ ಪ್ರಚಾರ ನಡೆಸಿದ್ದ ಬಿಜೆಪಿಗೆ ಬಿದ್ದಿದ್ದು ಒಂದೇ ವೋಟ್, 5 ಸದಸ್ಯರ ಕುಟುಂಬದ ಅಭ್ಯರ್ಥಿಗೆ ಬಿಗ್ ಶಾಕ್

ತಮಿಳುನಾಡು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಐದು ಸದಸ್ಯರನ್ನು ಹೊಂದಿರುವ ಕುಟಂಬದ ಬಿಜೆಪಿ ಅಭ್ಯರ್ಥಿಯು ಕೇವಲ ಒಂದು ಮತ ಪಡೆದಿದ್ದಾರೆ.

ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ. ಕಾರ್ತಿಕ್ ಕುಟುಂಬದಲ್ಲಿ 5 ಸದಸ್ಯರನ್ನು ಹೊಂದಿದ್ದರೂ ಕೇವಲ ಒಂದು ಮತವನ್ನು ಪಡೆದರು. ಅವರು ಕೊಯಮತ್ತೂರು ಜಿಲ್ಲೆಯ ಪೆರಿಯನೈಕೆನ್ಪಾಳ್ಯಂ ಒಕ್ಕೂಟದಲ್ಲಿ ವಾರ್ಡ್ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದರು.

ಈ ಘಟನೆಯೊಂದಿಗೆ ಅವರ ಉಮೇದುವಾರಿಕೆಯು ಅಣಕವಾಗಿದೆ. #Single_Vote_BJP ಯೊಂದಿಗೆ ವೈರಲ್ ಆಗಿ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿತ್ತು.

ಬರಹಗಾರ್ತಿ ಮತ್ತು ಕಾರ್ಯಕರ್ತೆ ಮೀನಾ ಕಂದಸಾಮಿ ಟ್ವೀಟ್ ಮಾಡಿ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಕೇವಲ ಒಂದು ಮತ ಸಿಕ್ಕಿದೆ. ಇತರರಿಗೆ ಮತ ಹಾಕಲು ನಿರ್ಧರಿಸಿದ ಅವರ ಮನೆಯ ಇತರ ನಾಲ್ಕು ಮತದಾರರ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.

INC ಮುಖಂಡ ಅಶೋಕ್ ಕುಮಾರ್, ಐದು ಸದಸ್ಯರಿರುವ ಕುಟುಂಬದ ಬಿಜೆಪಿ ಅಭ್ಯರ್ಥಿ ಒಂದೇ ಒಂದು ಮತವನ್ನು ಪಡೆದರು. ಈ ರೀತಿ ತಮಿಳುನಾಡಿನಲ್ಲಿ ಬಿಜೆಪಿಗೆ ಬೆಂಬಲ ಸಿಕ್ಕಿದೆ ಎಂದಿದ್ದಾರೆ.

ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಅಕ್ಟೋಬರ್ 6 ಮತ್ತು 9 ರಂದು ನಡೆಯಿತು. ಒಟ್ಟಾರೆಯಾಗಿ, 79,433 ಅಭ್ಯರ್ಥಿಗಳು 27,003 ಹುದ್ದೆಗಳಿಗೆ ಸ್ಪರ್ಧಿಸಿದ್ದರು. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಂತಹ ಕೇಂದ್ರ ನಾಯಕತ್ವದ ಫೋಟೋ ಒಳಗೊಂಡ ಪೋಸ್ಟರ್‌ಗಳೊಂದಿಗೆ ಕಾರ್ತಿಕ್ ಚುನಾವಣೆಗೆ ಭಾರೀ ಪ್ರಚಾರ ಮಾಡಿದ್ದರು. ಆದರೆ, ಅವರು ಕೇವಲ ಒಂದು ಮತವನ್ನು ಮಾತ್ರ ಪಡೆಯಲು ಸಾಧ್ಯವಾಯಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...