alex Certify Video | ಥೇಟ್​ ಏಲಿಯನ್​​ನಂತೆಯೇ ಇದೆ ಈ 1000 ವರ್ಷ ಹಳೆಯ ಮಮ್ಮಿ: ವೈರಲ್​ ಆಯ್ತು ಫೋಟೋಸ್​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Video | ಥೇಟ್​ ಏಲಿಯನ್​​ನಂತೆಯೇ ಇದೆ ಈ 1000 ವರ್ಷ ಹಳೆಯ ಮಮ್ಮಿ: ವೈರಲ್​ ಆಯ್ತು ಫೋಟೋಸ್​​

ಯುಎಫ್​ಓ ಪರಿಣಿತರೊಬ್ಬರು ಮೆಕ್ಸಿಕನ್​ ಕಾಂಗ್ರೆಸ್​​ನಲ್ಲಿ ಮೂರು ಬೆರಳುಗಳು ಕೈ ಹಾಗೂ ಪಾದಗಳನ್ನು ಹೊಂದಿರುವ ವಿಚಿತ್ರವಾದ ಶವದ ಫೋಟೋವನ್ನ ಬಹಿರಂಗಪಡಿಸಿದ್ದಾರೆ. ಈ ಒಂದು ವಿಶೇಷ ಕಾರ್ಯಾಚರಣೆಯ ಮುಂದಾಳತ್ವ ವಹಿಸಿದ್ದ ಜೈಮ್ ಮೌಸ್ಸನ್​, ಈ ವಿಚಿತ್ರ ಕಾಯ ಬಹಿರಂಗಪಡಿಸಿದ್ದಾರೆ.

ಪೆರುವಿನ ಕುಸ್ಕೋದಲ್ಲಿನ ಗಣಿಯಿಂದ ತೆಗೆದ ಈ ಮಮ್ಮಿಯು ಶೇಕಡಾ 30ರಷ್ಟು ಮನುಷ್ಯನ ಹೋಲಿಕೆ ಹೊಂದಿದೆ ಎನ್ನಲಾಗಿದೆ.
ಫೋಟೋದಲ್ಲಿ ತೋರಿಸಲಾದ ದೇಹಗಳು ಸರಿಸುಮಾರು ಮನುಷ್ಯನ ಆಕಾರದಲ್ಲಿಯೇ ಇದೆ. ಉದ್ದನೆಯ ತಲೆಬುರುಡೆ ಇರುವ ಈ ವಿಚಿತ್ರ ಏಲಿಯನ್​​ ಒಂದು ರೀತಿ ಹಕ್ಕಿಯಂತೆಯೂ ಕಾಣುತ್ತೆ ಅಂತಾ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೇ ಇವುಗಳಿಗೆ ಯಾವುದೇ ಹಲ್ಲಿಲ್ಲ ಎನ್ನಲಾಗಿದೆ.

ಇವುಗಳು ನಮ್ಮ ಭೂಮಿಯ ವಿಕಾಸದ ಭಾಗವಲ್ಲ. ಇವುಗಳು ಯುಎಫ್​ಓ ಅವಶೇಷದ ಬಳಿಕ ಕಂಡು ಬಂದ ಜೀವಿಗಳೂ ಸಹ ಅಲ್ಲ. ಇವುಗಳೆಲ್ಲ ಡಯಾಟಮ್​ ಗಣಿಗಳಲ್ಲಿ ಕಂಡು ಬಂದಿವೆ ಎಂದು ಯುಎಫ್​ಓ ತಜ್ಞ ಹೇಳಿದ್ದಾರೆ.

— Sachin (@Sachinshowtime) September 13, 2023

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...